ಲವ್ ಮಾಕ್ಟೇಲ್, ಸೈಲೆಂಟ್ ಆಗಿ ಕನ್ನಡ ಚಿತ್ರಪ್ರೇಮಿಗಳ ಹೃದಯ ಗೆದ್ದ ಸಿನಿಮಾ. ಕನ್ನಡದಲ್ಲಿ ಸೂಪರ್ ಸಕ್ಸಸ್ ಆಗಿರುವ ಈ ಸಿನಿಮಾ ಇದೀಗ ತೆಲುಗಿಗೆ ರಿಮೇಕ್ ಆಗಿದೆಯಂತೆ. ತೆಲುಗಿನಲ್ಲಿ ಚುಕ್ಕಲ ಪಲ್ಲಕಿಲೋ’ ಹೆಸ್ರಲ್ಲಿ ಲವ್ ಮಾಕ್ಟೇಲ್ ರಿಮೇಕ್ ಆಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್
ಚುಕ್ಕಲ ಪಲ್ಲಕಿಲೋ ಸಿನಿಮಾಗೆ ಕನ್ನಡದ ಖ್ಯಾತ ನಿರ್ದೇಶಕ ನಾಗಶೇಖರ್ ಅವರು ಆಕ್ಷನ್ ಕಟ್ ಹೇಳಲಿದ್ದು, ತೆಲುಗು ನಿರ್ಮಾಪಕ ಶ್ರೀಧರ್ ರೆಡ್ಡಿ ನಿರ್ಮಾಣ ಮಾಡಲಿದ್ದಾರಂತೆ. ಇನ್ನು ಲವ್ ಮಾಕ್ಟೇಲ್ ನಲ್ಲಿ ಆದಿ-ನಿಧಿಮ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಪ್ರೀತಿ ಪ್ರಣಯ, ಬದುಕು, ನೋವಿನ ಸುತ್ತ ಸುತ್ತುವ ಕಥೆಯಲ್ಲಿ ಈ ಆದಿಯಾಗಿ ಕೃಷ್ಣ, ನಿಧಿಮ ಆಗಿ ಮಿಲನ ನಾಗರಾಜ್ ಮನೋಜ್ಞವಾಗಿ ನಟಿಸಿ ಪಾತ್ರಗಳಿಗೆ ಜೀವ ತುಂಬಿದ್ದರು.
ತೆಲುಗಿನಲ್ಲಿ ಈ ಇಬ್ಬರಂತೆ ಯಾರ ಕಾಂಬಿನೇಶನ್ ವರ್ಕ್ ಔಟ್ ಆಗುತ್ತೆ ಅನ್ನೋ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದ್ದು, ಈಬಗ್ಗೆ ನಾಗಶೇಖರ್ ಎಲ್ಲೂ ಬಹಿರಂಗ ಪಡಿಸಿಲ್ಲ. ಇನ್ನು ಚಿತ್ರದಲ್ಲಿ ನಾಗಶೇಖರ್ ಬಿಟ್ಟರೆ ಉಳಿದ ಕಲಾವಿದರು ಮತ್ತು ತಂತ್ರಜ್ಞರೆಲ್ಲರೂ ತೆಲುಗಿನವರೆ ಇರಲಿದ್ದಾರೆ.
ಅಂದ್ಹಾಗೆ ಚುಕ್ಕಲ ಪಲ್ಲಕಿಲೋ, ಮೆಗಾಸ್ಟಾರ್ ಚಿರಂಜೀವಿ ನಟನೆಯ ಸ್ಟೇಟ್ ರೌಡಿ ಸಿನಿಮಾದ ಪ್ರಸಿದ್ಧ ಹಾಡಿನ ಸಾಲು. ನಾಗಶೇಖರ್ ಜೊತೆ ಡಾರ್ಲಿಂಗ್ ಕೃಷ್ಣ ಸಿನಿಮಾ ಇನ್ನು ನಾಗಶೇಖರ್ ಅವರು email protected ಅನ್ನೋ ಸಿನಿಮಾ ನಿರ್ದೇಶಿಸುತ್ತಿದ್ದು, ಈ ಸಿನಿಮಾದಲ್ಲಿ ಹೀರೋ ಆಗಿ ಕೃಷ್ಣ ಮಿಂಚಲಿದ್ದಾರೆ. ಹೀರೋಯಿನ್ ಆಗಿ ರಾಧಿಕಾ ಕುಮಾರಸ್ವಾಮಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.