ಬೆಂಗಳೂರು : ಒಂದೆಡೆ ಕೋವಿಡ್ 3ನೇ ಅಲೆ ತಗ್ಗುತ್ತಿದೆ.. ಮತ್ತೊಂದೆಡೆ ಸಿನಿಮಾ ರಂಗವೂ ಚೇತರಿಸಿಕೊಂಡಿದ್ದು , ರಿಲೀಸ್ ಗಾಗಿ ಕಾಯುತ್ತಿರುವ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ತಯಾರಿ ನಡೆಸಿವೆ… ಅಲ್ಲದೇ ಥಿಯೇಟರ್ ಗಳಲ್ಲಿ 100 % ಸೀಟಿಂಗ್ ಇರುವುದರಿಂದ ಮೇಕರ್ಸ್ ಸಿನಿಮಾಗಳ ರಿಲೀಸ್ ಮಾಡಲು ಧರ್ಯ ಮಾಡಿದ್ದಾರೆ. ಇಂದು ಥಿಯೇಟರ್ ಗಳಲ್ಲಿ ಕನ್ನಡದ ಒಟ್ಟು 6 ಸಿನಿಮಾಗಳು ರಿಲೀಸ್ ಆಗಿವೆ..
ಹಾಗಾದ್ರೆ ಯಾವೆಲ್ಲಾ ಕನ್ನಡದ ಸಿನಿಮಾಗಳು ಥಿಯೇಟರ್ ಗಳಲ್ಲಿ ರಿಲೀಸ್ ಆಗಿವೆ..???
ಲವ್ ಮಾಕ್ಟೆಲ್ 2
ಮೊದಲನೇಯದ್ದಾಗಿ ಆಫ್ ಸ್ಕ್ರೀನ್ ಕಪಲ್ ಡಾರ್ಲಿಂಗ್ ಕೃಷ್ಣ , ಮಿಲನ ನಾಗರಾಗ್ ಅವರ ಅಭಿನಯದ ಲವ್ ಮಾಕ್ಟೇಲ್ 2 ಸಿನಿಮಾ ರಿಲೀಸ್ ಆಗಿದೆ.. ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ ಈ ಜೋಡಿಯೇ ಈ ಸಿನಿಮಾದ ಕಥೆ ಬರೆದು ನಿರ್ಮಾಣ ಮಾಡಿರುವುದು.. ಅಂದ್ಹಾಗೆ ಈ ಸಿನಿಮಾ 2020 ರಲ್ಲಿ ಬಿಉಗಡೆಯಾಗಿದ್ದ ಲವ್ ಮಾಕ್ಟೇಲ್ ಸಿನಿಮಾದ ಸೀಕ್ವೆಲ್ ಆಗಿದೆ.. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು…
ಒಪ್ಪಂದ
ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ನಟಿಸಿರುವ ಒಪ್ಪಂದ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ತೆಲುಗಿನ ನಟ ಜೆಡಿ ಚಕ್ರವರ್ತಿ, ಅಮೀರ್ ಖಾನ್ ಸಹೋದರ ಫೈಸಲ್ ಖಾನ್, ಸೋನಿ ಚರಿಶ್ಟ, ವಿಶ್ವನಾಥ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ..
ಫ್ಲೋರ್ ವಾಲ್ಸ್
ಕೌಟುಂಬಿಕ ಕಥೆಯಾಧಾರಿತ ಸಿನಿಮಾ ಫ್ಲೋರ್ ವಾಲ್ಸ್ ಸಿನಿಮಾ ಕೂಡ ರಿಲೀಸ್ ಆಗಿದೆ.. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಎಸ್‌ಎಸ್ ಸಜ್ಜನ್ ನಿರ್ದೇಶಿಸಿರುವ ಈ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಹೆಣ್ಣು ಮಕ್ಕಳನ್ನು ಶಿಸ್ತಿನಿಂದ ಬೆಳೆಸುವ ಕಾಪಾಡುವ ತಂದೆಯ ಪಾತ್ರವನ್ನ ಅಚ್ಯುತ್ ಕುಮಾರ್ ಅವರು ನಿಭಾಯಿಸಿದ್ದಾರೆ..
ಇದೇ ಅಂತರಂಗ ಶುದ್ಧಿ
ಆರ್ಯವರ್ಧನ್ ನಾಯಕರಾಗಿ ನಟಿಸಿ , ಕುಮಾರ ದತ್ತ ನಿರ್ದೇಶಿಸಿರುವ ಈ ಸಿನಿಮಾ ಕೂಡ ಇಂದು ರಿಲೀಸ್ ಆಗಿದೆ..
ರೌಡಿ ಬೇಬಿ
‘ರೌಡಿ ಬೇಬಿ’ ಸಿನಿಮಾದಲ್ಲಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.. ಸಿನಿಮಾವನ್ನು ಇ ಕೃಷ್ಣ ನಿರ್ದೇಶನ ಮಾಡಿದ್ದಾರೆ..
ಪ್ರೀತಿಗಿಬ್ಬರು
ಹೊಸಬರ ಈ ಸಿನಿಮಾ ಕೂಡ ಇಂದೇ ರಿಲೀಸ್ ಆಗಿದೆ..