ಈ ಹಿಂದೆ ಡಿಂಪಲ್ ಕ್ವೀನ್ ರಚಿತಾ ರಾಮ್ ಉಪೇಂದ್ರ ಅಭಿನಯದ “ಐ ಲವ್ ಯೂ” ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ರು.. ಆಗ ಅವರು ಸಾಕಷ್ಟೂ ಟ್ರೋಲ್ ಗಳಿಗೂ ಒಳಗಾಗಿದ್ರು.. ನಂತರ ಅವರೇ ಖುದ್ದು ತಾವು ಇನ್ಮುಂದೆ ಬೋಲ್ಡ್ ಪಾತ್ರಗಳನ್ನ ಮಾಡಲ್ಲ ಎಂದು ಕ್ಯಾಮೆರಾ ಮುಂದೆ ಕಣ್ಣೀರಿಟ್ಟಿದ್ದರು..
ಆದ್ರೆ ಇದೀಗ ಮತ್ತೆ “ಲವ್ ಯು ರಚ್ಚು” ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.. ಲವ್ ಯು ರಚ್ಚು ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ವೇಳೆ ಅವರು ನೀಡಿದ ಹೇಳಿಕೆ ರಚಿತಾ ರಾಮ್ ರನ್ನು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಸಿದೆ.
ಕೃಷ್ಣ ಅಜೇಯ್ ರಾವ್ ಹಾಗೂ ರಚಿತಾ ರಾಮ್ ನಟಿಸುತ್ತಿರುವ ಲವ್ ಯು ರಚ್ಚು ಸಿನಿಮಾ ರೊಮ್ಯಾಂಟಿಕ್ ಸಾಂಗ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ನಂತರ ಚಿತ್ರತಂಡ ಪ್ರೆಸ್‌ಮೀಟ್ ಕರೆದಿತ್ತು. ಈ ವೇಳೆ ರಚಿತಾ ಹಾಡಿನ ರೊಮ್ಯಾಂಟಿಕ್ ಸೀನ್ ಬಗ್ಗೆ ವಿವರಿಸುವಾಗ ಫಸ್ಟ್‌ನೈಟ್ ಬಗ್ಗೆ ಮಾತನಾಡಿದ್ದೇ ವಿವಾದಕ್ಕೆ ಕಾರಣವಾಗಿದೆ.
ಬೋಲ್ಡ್ ಪಾತ್ರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ರಚಿತಾ ಫಸ್ಟ್ನೈಟ್ನಲ್ಲಿ ಮದುವೆಯಾದ ಜೋಡಿ ಏನು ಮಾಡುತ್ತೆ? ಎಂದು ಪ್ರಶ್ನೆ ಮಾಡಿದ್ದರು. ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಈಗ ಚಾಮರಾಜ ನಗರದ ಕ್ರಾಂತಿದಳ ಸಂಘಟನೆ ರಚಿತಾ ರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಸ್ಯಾಂಡಲ್ವುಡ್ ನಟಿ ರಚಿತಾ ಈ ಹೇಳಿಕೆ ವಿರುದ್ಧ ಸಾರ್ವಜನಿಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕನ್ನಡ ಕ್ರಾಂತಿ ಸಂಘಟನೆ ಆಗ್ರಹಿಸಿದೆ.
ಅಲ್ಲದೇ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ರಚಿತಾ ರಾಮ್ರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಕ್ರಾಂತಿದಳ ಸಂಘಟನೆ ಮನವಿ ಮಾಡಿಕೊಂಡಿದೆ. ಗುರುದೇಶ್ ಪಾಂಡೆ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.