Lover Stabs His Girlfriend : ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಯುವತಿಗೆ 6 ಬಾರಿ ಚುಚ್ಚಿದ ಯುವಕ…
ಗೆಳತಿಯೊಂದಿಗೆ ಬ್ರೇಕಪ್ ಆಗಿದ್ದಕ್ಕೆ ಕೋಪಗೊಂಡ ಯುವಕ ಹುಡುಗಿಯೊಬ್ಬಳಿಗೆ ಚಾಕುವುನಿಂದ 6 ಬಾರಿ ಇರಿದಿರುವ ಘಟನೆ ದೆಹಲಿಯ ಆದರ್ಶ್ ನಗರದಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಗಾಯಗೊಂಡ ಬಾಲಕಿಯನ್ನ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿಯನ್ನ ಸುಖ್ವಿಂದರ್ ಸುಖ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ಹರಿಯಾಣದ ಅಂಬಾಲಾದಲ್ಲಿ ಬಂಧಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಂತ್ರಸ್ತ ಯುವತಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಾಳೆ. 5 ವರ್ಷಗಳ ಹಿಂದೆ ಸುಖ್ವಿಂದರ್ ಜೊತೆ ಸ್ನೇಹ ಬೆಳೆಸಿದ್ದಳು. ಹುಡುಗಿಯ ಮನೆಯವರು ಸಂಬಂಧವನ್ನ ಒಪ್ಪದ ಕಾರಣ ಹುಡುಗಿ ಹುಡುಗನನ್ನ ದೂರವಾಗಲು ಪ್ರಾರಂಭಿಸಿದಳು. ಇದರಿಂದ ಮನನೊಂದಿದ್ದ ಸುಖ್ವಿಂದರ್ ಯುವತಿಯನ್ನ ಭೇಟಿಯಾಗಲು ಕರೆದಿದ್ದಾನೆ. ಹುಡುಗಿ ಮನೆಯ ಸಮೀಪದ ಬೀದಿಯಲ್ಲಿ ಭೇಟಿ ಮಾಡಲು ಹೋಗಿದ್ದಾಳೆ ಈ ವೇಳೆ ಯುವಕ ಯುವತಿಯ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಆರೋಪಿ ಬಾಲಕಿಯ ಮೇಲೆ ಏಕಾ ಏಕಿ ಹ್ಲಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. Lover Stabs His Girlfriend: The young man stabbed the girl 6 times for breaking up…








