ಮೈಸೂರು: ಪ್ರೀತಿಸುತ್ತಿದ್ದ ಯುವತಿಯನ್ನು ಕೊಲೆ ಮಾಡಿ, ನಂತರ ನಡುರಸ್ತೆಯಲ್ಲೇ ಹಾಡಹಗಲೇ ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಕರಳಪುರ ಗ್ರಾಮದ ಸಿದ್ದರಾಜು ಎಂಬಾತನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಹೊತ್ತಿ ಉರಿಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಶವದ ಮಾಹಿತಿಯೂ ಪತ್ತೆಯಾಗಿದ್ದು, ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಭಾಗ್ಯ (18) ಎಂದು ಗುರುತಿಸಲಾಗಿದೆ.
ಹುಲ್ಲಹಳ್ಳಿಯಲ್ಲಿ ವಕೀಲರೊಬ್ಬರ ಕಚೇರಿಯಲ್ಲಿ ಯುವತಿ ಭಾಗ್ಯ ಟೈಪಿಸ್ಟ್ ಆಗಿದ್ದಳು. ಕೊಲೆಯಾದ ಭಾಗ್ಯ ಹಾಗೂ ಸಿದ್ದರಾಜು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವಂತೆ ಸಿದ್ದರಾಜುಗೆ ಭಾಗ್ಯ ಒತ್ತಡ ಹೇರಿದ್ದಳು. ಮದುವೆಗೆ ಒತ್ತಡ ಹೇರುತ್ತಿದ್ದ ಭಾಗ್ಯಳನ್ನ ಮುಗಿಸಲೇಬೇಕೆಂದು ಸಿದ್ದರಾಜು ಸ್ಕೆಚ್ ಹಾಕಿದ್ದ.
ಇದಕ್ಕೆಂದು ನವೆಂಬರ್ 7ರಂದು ಮಧ್ಯಾಹ್ನ ಭಾಗ್ಯಳನ್ನ ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ದ ಸಿದ್ದರಾಜು, ಭಾಗ್ಯಳ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದು ಬೆಂಕಿ ಹಚ್ಚಿ ಸ್ಥಳದಿಂದ ಕಾಲ್ಕಿತ್ತಿದ್ದ.

ಕಳೆದ ಸೋಮವಾರ ಭಾಗ್ಯ ತಂದೆ ಮಹದೇವಶೆಟ್ಟಿ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಭಾಗ್ಯಳ ಮೊಬೈಲ್ ಟವರ್ ಟ್ರೇಸ್ ಮಾಡಿ ಆಕೆಯ ಪತ್ತೆ ಹಚ್ಚಿದ್ದಾರೆ. ಜತೆಗೆ ಭಾಗ್ಯ ಧರಿಸಿದ್ದ ಬಟ್ಟೆ ಮತ್ತು ಕಾಲು ಗೆಜ್ಜೆಯಿಂದ ಗುರುತುನ್ನು ಪೋಷಕರು ಖಚಿತಪಡಿಸಿದ್ದಾರೆ.
ಇವಿಷ್ಟು ಮಾಹಿತಿ ಸಿಗುತ್ತಿದ್ದಂತೆ ಪಿರಿಯಾಪಟ್ಟಣ ಪೊಲೀಸರ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿ ಸಿದ್ದರಾಜುವನ್ನು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ. ಆರೋಪಿ ಸಿದ್ದರಾಜುಗೆ ಕೊಲೆ ಮಾಡಲು ಸಹಕಾರ ನೀಡಿದ ನಂಜನಗೂಡು ಚಾಮಲಾಪುರ ಹುಂಡಿಯ ಪ್ರಸನ್ನ ಕುಮಾರ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








