ನಮಗೆ ರಕ್ಷಣೆ ಕೊಡಿ.. ಎಸ್ಪಿ ಕಚೇರಿ ಮೆಟ್ಟಿಲೇರಿದ ಪ್ರೇಮಿಗಳು chitradurga saaksha tv
ಚಿತ್ರದುರ್ಗ : ರಕ್ಷಣೆ ಕೋರಿ ಯುವ ಪ್ರೇಮಿಗಳು ಎಸ್ಪಿ ಕಚೇರಿ ಮೆಟ್ಟಿಲೇರಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಯುವಕ ದ್ಯಾಮಕುಮಾರ್ (26), ಅಂಕಿತ (19) ಎಂಬುವವರು ರಕ್ಷಣೆ ಕೋರಿ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಅವರನ್ನು ಭೇಟಿ ಮಾಡಿದ್ದಾರೆ.
ದ್ಯಾಮಕುಮಾರ್, ಅಂಕಿತ ಕಳೆದ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದ್ರೆ ಇವರ ಜಾತಿ ಬೇರೆಯಾಗಿದ್ದು, ಇವರ ವಿವಾಹಕ್ಕೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಿಂದ ಈ ಪ್ರೇಮಿಗಳು ಚಿತ್ರದುರ್ಗ ನಗರದ ಕಣಿವೆ ಮಾರಮ್ಮ ದೇವಸ್ಥಾನದ ಬಳಿ ವಿವಾಹವಾಗಿದ್ದಾರೆ.
ಈ ವಿಷಯ ತಿಳಿದ ಯುವತಿ ಮನೆಯವರಿಂದ ದ್ಯಾಮಕುಮಾರ್ ಮತ್ತು ಅಂಕಿತಾಗೆ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ
ಸೂಕ್ತ ರಕ್ಷಣೆ ನೀಡುವಂತೆ ಎಸ್ ಪಿ ರಾಧಿಕಾ ಅವರಿಗೆ ನವ ಜೋಡಿ ಮನವಿ ಸಲ್ಲಿಸಿದೆ.









