LPG ಸಿಲಿಂಡರ್ ಕೊಟ್ಟು , ಟಾಯ್ಲೆಟ್ ನಿರ್ಮಾಣವೇ ಮಹಿಳಾ ಸಬಲೀಕರಣ ಅಲ್ಲ : ಪ್ರಿಯಾಂಕಾ ಗಾಂಧಿ
ನವದೆಹಲಿ : ಉತ್ತರಪ್ರದೇಶ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಕಾಂಗ್ರೆಸ್ ನಡುವೆ ವಾಕ್ ಸಮರ , ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ.. ಈ ನಡುವೆ LPG ಸಿಲಿಂಡರ್ ಕೊಡೋದು, ಟಾಯ್ಲೆಟ್ ಕಟ್ಟಿಸಿಕೊಡುವುದೇ ಮಹಿಳಾ ಸಬಲೀಕರಣ ಅಲ್ಲ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ರಾಯ್ ಬರೇಲಿಯಲ್ಲಿ ಚುನಾವಣಾ ಪ್ರಯುಕ್ತ ನಡೆದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಮಹಿಳೆಯರ ಸ್ವಾಭಿಮಾನದಿಂದ ಬದುಕುವುದು ಹಾಗೂ ಎಲ್ಲಾ ತಾರತಮ್ಯಗಳ ವಿರುದ್ಧ ಹೋರಾಡೋದು ಮಹಿಳಾ ಸಬಲೀಕರಣವೇ ಹೊರತು, LPG ಕೊಟ್ಟು ಮತ್ತು ಟಾಯ್ಲೆಟ್ ಕಟ್ಟೋದು ಅಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ಧರ್ಮದ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಹುಲ್ ಗಾಂಧಿ ಹಿಂದು ಮತ್ತು ಹಿಂದುತ್ವದ ಕುರಿತಾಗಿ ಹೇಳಿರುವುದು ಸರಿ ಇದೆ. 2 ಪದಗಳ ನಡುವೆ ಇರುವ ವ್ಯತ್ಯಾಸದ ಕುರಿತಾಗಿ ರಾಹುಲ್ ಮಾತನಾಡಿದ್ದರು. ಹಿಂದುತ್ವ ಪ್ರೀತಿ ಮತ್ತು ಏಕತೆಯನ್ನು ಕಲಿಸುತ್ತದೆ. RSS ಮತ್ತು ಬಿಜೆಪಿ ಅವರು ಬಲಪಂಥೀಯರು ಆಗಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ಮಹಿಳೆಯರ ಬಲವರ್ಧನೆಗೆ ಮೋದಿ ಅವರ ನೇತೃತ್ವದ ಸರ್ಕಾರ ಯಾವುದೇ ಕೊಡುಗೆ ಕೊಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ವೋಟ್ ನೀಡಬೇಕಾದ ಸಮಯದಲ್ಲಿ ಸರಿಯಾಗಿ ಯೋಚಿಸಿ ಎಂದು ಪ್ರಿಯಾಂಕಾ ಗಾಂಧಿ ಎಚ್ಚರಿಸಿದ್ದಾರೆ..







