ಪ್ಯಾರೇ ದೇಶ್ ವಾಸಿಯೋ ಗಮನಿಸಿ : ಎಲ್ ಪಿಜಿ ಸಿಲಿಂಡರ್ ದರ ಏರಿಕೆ LPG cylinder saaksha tv
ನವದೆಹಲಿ : ದೇಶದಲ್ಲಿ ಬೆಲೆ ಏರಿಕೆಯ ಹಿಂಸೆ ಮುಂದುವರೆದಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೆ ಇದೀಗ ಎಲ್ ಪಿಜಿ ಸಿಲಿಂಡರ್ ದರದಲ್ಲೂ ಸಹ ಏರಿಕೆಯಾಗಿದೆ.
ದೇಶದಾದ್ಯಂತ ವಾಣಿಜ್ಯ ಸಿಲಿಂಡರ್ ಬೆಲೆ 43.50 ರೂಪಾಯಿ ಏರಿಕೆಯಾಗಿದೆ.
ದೇಶದಲ್ಲಿ ಪೆಟ್ರೋಲಿಯಂ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ದರ ಪರಿಷ್ಕರಣೆ ನಡೆಸುತ್ತವೆ.
ಅದರಂತೆ ಇಂದು ದರ ಪರಿಷ್ಕರಣೆ ನಡೆದಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯಾಗಿದೆ.
ಇದರೊಂದಿಗೆ ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 1,736.50 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆ 1,770.50 ರೂಪಾಯಿಯಿಂದ 1,805.50 ರೂಪಾಯಿಗೆ ಏರಿಕೆಯಾಗಿದೆ.









