ಪ್ಯಾರೇ ದೇಶವಾಸಿಯೋ ಗಮನಿಸಿ : ಮತ್ತೆ ಅಡುಗೆ ಸಿಲಿಂಡರ್ ದರ ಏರಿಕೆ..!
ದಿನೇ ದಿನೇ ದಿನ ಬಳಕೆ ವಸ್ತುಗಳ ದರ ಗಗನಕ್ಕೇರುತ್ತಿದೆ.. ಜನಸಾಮಾನ್ಯರ ಪರದಾಟ ಹೇಳತೀರದ್ದಾಗಿದೆ.. ಅಡುಗೆ ಎಣ್ಣೆ ಪೆಟ್ರೋಲ್ ರೇಟ್ ಹೆಚಚ್ಚಿಸುತ್ತಲೇ ಇರುವ ಸರ್ಕಾರ ಇದೀಗ ಮತ್ತೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ.. ಹೌದು ಮತ್ತೆ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.. ಪೆಟ್ರೋಲಿಯಂ ಕಂಪನಿಗಳು ಅಡುಗೆ ಸಿಲಿಂಡರ್ ಬೆಲೆಯನ್ನ ದಿಢೀರ್ 25ರೂಗಳಿಗೆ ಏರಿಸಿದ್ದು, ಪ್ರತೀ 14.2 ಕೆಜಿ ಎಲ್ ಪಿಜಿ ದರದಲ್ಲಿ 25ರೂ ಏರಿಕೆಯಾಗಿದೆ.
ಕಳೆದ ಜುಲೈ 1 ರಂದು ಪ್ರತೀ ಸಿಲಿಂಡರ್ ಗೆ 25.50 ರೂ ಏರಿಕೆ ಮಾಡಲಾಗಿತ್ತು. ಒಂದೇ ತಿಂಗಳ ಅವಧಿಯಲ್ಲಿ ಮತ್ತೆ 25ರೂ ಏರಿಕೆ ಮಾಡಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಹೊಸ ಎಲ್ ಪಿಜಿ ದರ ಹೀಗಿದೆ ಬೆಂಗಳೂರು – 862.50 ರೂ.ದಿಲ್ಲಿ- 859.5 ರೂ.ಮುಂಬಯಿ- 859.50 ರೂ.ಕೋಲ್ಕತ- 886.00 ರೂ.ಚೆನ್ನೈ- 875.50 ರೂ.ಲಖನೌ- 897.50 ರೂ.ಅಹಮದಾಬಾದ್- 866.50 ರೂ.