ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗೆ ಕೊರೋನಾ ಸೋಂಕು – ಏಮ್ಸ್ ಕೋವಿಡ್ ಸೆಂಟರ್ಗೆ ದಾಖಲು
ಹೊಸದಿಲ್ಲಿ, ಮಾರ್ಚ್21: ಮಾರ್ಚ್ 20 ರಂದು ಕೊರೋನವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಏಮ್ಸ್ ಕೋವಿಡ್ಸೆಂಟರ್ಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ ಎಂದು ಆಸ್ಪತ್ರೆ ಭಾನುವಾರ ತಿಳಿಸಿದೆ.
ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರ ಎಲ್ಲಾ ನಿಯತಾಂಕಗಳು ಸಾಮಾನ್ಯವಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಆಸ್ಪತ್ರೆಯ ಪ್ರಕಾರ, ಮಾರ್ಚ್ 19 ರಂದು 58 ವರ್ಷದ ಓಂ ಬಿರ್ಲಾ ಅವರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದೆ. ಅವರನ್ನು ಮರುದಿನ ವೀಕ್ಷಣೆಗಾಗಿ ಏಮ್ಸ್ ಕೋವಿಡ್ ಸೆಂಟರ್ ಗೆ ದಾಖಲಿಸಲಾಗಿದೆ.
ಲೋಕಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರವೂ ಸಹ ಕಲಾಪವನ್ನು ನಡೆಸಿಕೊಟ್ಟಿದ್ದಾರೆ.
ಬಾಳೆಹಣ್ಣಿನೊಂದಿಗೆ ಹಾಲು ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/vUrt3OH4rL
— Saaksha TV (@SaakshaTv) March 16, 2021
ವಾಟ್ಸಾಪ್ ನಲ್ಲಿ ರೈಲಿನ ಸಮಯದ ಆಪ್ಡೇಟ್ಸ್ (live status) ಪಡೆಯುವುದು ಹೇಗೆ – ಇಲ್ಲಿದೆ ಮಾಹಿತಿ https://t.co/zCUP18XFFs
— Saaksha TV (@SaakshaTv) March 16, 2021
ಚಟ್ಟಂಬಡೆ / ಮಸಾಲ ವಡಾ https://t.co/EgnEuP7qTp
— Saaksha TV (@SaakshaTv) March 16, 2021