LSG vs DC | ಲಖನೌ vs ಡೆಲ್ಲಿ ಕಾಳಗ ಪ್ಲೇಯಿಂಗ್ 11 ಹೇಗಿರಲಿದೆ..?
ಇಂಡಿಯನ್ ಪ್ರಿಮಿಯರ್ ಲೀಗ್ ನ 15 ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಬಾರಿಯ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರು ಪಂದ್ಯಗಳನ್ನಾಡಿದ್ದು, ಎರಡು ಪಂದ್ಯಗಳನ್ನ ಗೆದ್ದುಕೊಂಡಿದೆ. ಒಂದು ಪಂದ್ಯದಲ್ಲಿ ಸೋಲುಂಡಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎರಡು ಪಂದ್ಯಗಳನ್ನಾಡಿದ್ದು, ಒಂದು ಗೆಲುವು,ಒಂದು ಸೋಲು ಕಂಡಿದೆ.
ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಡೆಲ್ಲಿ ತಂಡದ ನಂತರದ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಲಕ್ನೋ ತಂಡ ಮೂರನೇ ಗೆಲುವಿನಗಾಗಿ ಪ್ಲಾನ್ ಮಾಡಿಕೊಂಡಿದೆ.
ತಂಡಗಳ ಸ್ಟ್ರೆಂಥ್ ಮತ್ತು ವೀಕ್ನೇಸ್ ವಿಚಾರವಾಗಿ ಮಾತನಾಡೋದಾದ್ರೆ, ಡೆಲ್ಲಿ ತಂಡಕ್ಕೆ ವಾರ್ನರ್ ಆಗಮಿಸಿರೋದು ಆನೆ ಬಲ ತಂದಿದೆ. ಹೀಗಾಗಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಇಂದಿನ ಪಂದ್ಯದಲ್ಲಿ ಪೃಥ್ವಿ ಶಾ ಜೊತೆಗೆ ಡೇವಿಡ್ ವಾರ್ನರ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೊತೆಗೆ ಮನ್ ದೀಪ್ ಸಿಂಗ್, ಕೆ.ಎಸ್.ಭರತ್,ಯಶ್ ಧೂಲ್ ನಡುವೆ ಪೈಪೋಟಿ ಇದೆ. ಆದ್ರೆ ಬೌಲಿಂಗ್ ವಿಭಾಗವದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆ ಇಲ್ಲ.

ಇನ್ನೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ. ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮನೀಷ್ ಪಾಂಡೆ ಫಾರ್ಮ್ ಕಂಡುಕೊಳ್ಳಬೇಕಿದೆ. ಹಾಗೇ ಎವಿನ್ ಲೂವಿಸ್ ಮತ್ತು ಆಯೂಷ್ ಬಡೋನಿ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಲಿದ್ದಾರೆ. ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ ಮತ್ತು ದೀಪಕ್ ಹೂಡಾ ಆಲ್ ರೌಂಡರ್ ಗಳು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದ್ದಾರೆ. ಆದ್ರೆ ಬೌಲಿಂಗ್ ವಿಭಾಗದಲ್ಲಿ ಆವೇಶ್ ಖಾನ್ ಮತ್ತು ಆಂಡ್ರ್ಯೂ ಟೈ ಮತ್ತು ರವಿ ಬಿಷ್ಣೋಯ್ ಅವರು ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
ಲೈಕ್ಲಿ ಪ್ಲೇಯಿಂಗ್ 11 ಬಗ್ಗೆ
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆ.ಎಲ್. ರಾಹುಲ್ (ನಾಯಕ)
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್)
ಮನೀಷ್ ಪಾಂಡೆ
ಎವಿನ್ ಲೂವಿಸ್
ಆಯುಷ್ ಬಡೋನಿ
ದೀಪಕ್ ಹೂಡಾ
ಜೇಸನ್ ಹೋಲ್ಡರ್
ಕೃನಾಲ್ ಪಾಂಡ್ಯ
ಆವೇಶ್ ಖಾನ್
ಆಂಡ್ರ್ಯೂ ಟೈ
ರವಿ ಬಿಷ್ಣೋಯ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಡೇವಿಡ್ ವಾರ್ನರ್
ಪೃಥ್ವಿ ಶಾ
ರಿಷಬ್ ಪಂತ್ (ನಾಯಕ)
ಕೆ.ಎಸ್. ಭರತ್
ಲಲಿತ್ ಯಾದವ್
ರೊವ್ಮನ್ ಪೊವೆಲ್
ಶಾರ್ದೂಲ್ ಥಾಕೂರ್
ಅಕ್ಷರ್ ಪಟೇಲ್
ಆನ್ರಿಚ್ ನೊರ್ಟೆಜೆ
ಕುಲದೀಪ್ ಯಾದವ್
ಮುಷ್ತಾಫಿಝುರ್ ರಹಮಾನ್
LSG vs DC April 7 Probable Playing XI








