LSG vs DC Match Preview | ಸೇಡು ತೀರಿಸಿಕೊಳ್ಳುತ್ತಾ ಡೆಲ್ಲಿ
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಇದು 15 ನೇ ಆವೃತ್ತಿಯ 45ನೇ ಪಂದ್ಯವಾಗಿದೆ. ಮುಂಬೈ ವಾಂಖೆಡೆ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.
ಈ ಎರಡೂ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.
ಮೊದಲ ಸೆಣಸಾಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಡೆಲ್ಲಿಗೆ ಇದು ಸೇಡಿನ ಸಮರವಾಗಿದೆ.
ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೂ ಎಂಟು ಪಂದ್ಯಗಳನ್ನಾಡಿದ್ದು, ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಇತ್ತ ರಾಹುಲ್ ನಾಯಕತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 9 ಪಂದ್ಯಗಳನ್ನಾಡಿದ್ದು, ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.
ಹೀಗಾಗಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ರಿಷಬ್ ನೇತೃತ್ವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿತ್ತು.
ಈ ಪಂದ್ಯದಲ್ಲಿ ಡೆಲ್ಲಿ ನಾಲ್ಕು ವಿಕೆಟ್ ಗಳಿಂದ ಜಯ ಸಾಧಿಸಿದ್ದು, ವಾರ್ನರ್ 42 ರನ್, ಕುಲ್ ದೀಪ್ 4 ವಿಕೆಟ್ ಪಡೆದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಿದ್ದು 20 ರನ್ ಗಳಲ್ಲಿ ಸೋಲು ಕಂಡಿತ್ತು.
ಕ್ವಿಂಟನ್ ಡಿ ಕಾಕ್ 46 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸದ್ಯ ಉತ್ತಮ ಗೆಲುವಿನ ಲಯದಲ್ಲಿರುವ ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆಲುವಿಗಾಗಿ ಗುದ್ದಾಟ ನಡೆಸಲಿವೆ.
ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ಸ್ ಗೆ ಹತ್ತಿರವಾಗೋದು ಉಭಯ ತಂಡಗಳ ಲೆಕ್ಕಾಚಾರವಾಗಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಡೆಲ್ಲಿ ತಂಡದಲ್ಲಿ ಒಗ್ಗಟ್ಟಿನ ಆಟದ ಕೊರತೆ ಕಾಣುತ್ತಿದೆ. ಬ್ಯಾಟಿಂಗ್ ನಲ್ಲಿ ಆರಂಭಿಕರನ್ನೇ ತಂಡ ಹೆಚ್ಚು ನಂಬಿಕೊಂಡಿದೆ. ಮುಖ್ಯವಾಗಿ ಡೇವಿಡ್ ವಾರ್ನರ್ ಮಾತ್ರ ಡೆಲ್ಲಿ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಪೃಥ್ವಿ ಶಾ ಅಬ್ಬರ ಕೇವಲ ಒಂದೆಡೆರಡು ಪಂದ್ಯಗಳಿಗೆ ಸೀಮಿತವಾಗಿದೆ. ಮಿಡಲ್ ಆರ್ಡರ್ ನಲ್ಲಿ ನಾಯಕ ರಿಷಬ್ ಪಂತ್, ಮಿಚೆಲ್ ಮಾರ್ಷ್ ಬ್ಯಾಟ್ ಅಬ್ಬರಿಸುತ್ತಿಲ್ಲ. ಇದು ತಂಡದ ಹಿನ್ನಡೆಗೆ ಕಾರಣವಾಗುತ್ತಿದೆ. ಆದ್ರೆ ಪೊವೆಲ್ ಫಾರ್ಮ್ ಗೆ ಬಂದಿರೋದು ತಂಡಕ್ಕೆ ನೆಮ್ಮದಿ ತಂದಿದೆ. ಇನ್ನು ಲಲಿತ್ ಯಾದವ್, ಅಕ್ಷರ್ ಪಟೇಲ್, ಶರ್ದೂಲ್ ಠಾಕೂರ್ ರನ್ ಗಳಿಸಿದ್ರೂ ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಆಟವಾಡುತ್ತಿಲ್ಲ.
ಬೌಲಿಂಗ್ ವಿಚಾರಕ್ಕೆ ಬಂದರೇ ಕುಲ್ ದೀಪ್ ಯಾದವ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಇವರಿಗೆ ಅಕ್ಷರ್ ಪಟೇಲ್ ಸಾಥ್ ನೀಡಬೇಕಿದೆ. ವೇಗದ ಬೌಲಿಂಗ್ ನಲ್ಲಿ ಮುಸ್ತಫಿಜೂರ್, ಚೇತನ್ ಸಕಾರಿಯಾ ವಿಕೆಟ್ ಬೇಟೆ ಶುರು ಮಾಡಿದ್ದು, ಶರ್ದೂಲ್ ಮಿಡಲ್ ಓವರ್ ಗಳಲ್ಲಿ ವಿಕೆಟ್ ಪಡೆಯಬೇಕಾಗಿದೆ.
ಇತ್ತ ಲಕ್ನೋ ಸೂಪರ್ ಜೈಂಟ್ಸ್ ವಿಚಾರಕ್ಕೆ ಬಂದ್ರೆ ಇಲ್ಲೂ ಮಿಡಲ್ ಆರ್ಡರ್ ಸಮಸ್ಯೆ ಕಾಡುತ್ತಿದೆ. ಆರಂಭಿಕರಾದ ಕೆ.ಎಲ್.ರಾಹುಲ್, ಕ್ವಿಂಟನ್ ಡಿ ಕಾಕ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದ್ರೆ ಮಿಡರ್ ಆರ್ಡರ್ ಬ್ಯಾಟರ್ ಗಳಿಂದ ಸ್ಥಿರ ಪ್ರದರ್ಶನ ಬರುತ್ತಿಲ್ಲ. ಮುಖ್ಯವಾಗಿ ಮಾರ್ಕಸ್ ಸ್ಟೋಯ್ನಿಸ್ ವೈಫಲ್ಯ ತಂಡಕ್ಕೆ ಮೈನಸ್ ಪಾಯಿಂಟ್ ಆಗಿದೆ. ಕೃನಾಲ್ ಪಾಂಡ್ಯ, ದೀಪಕ್ ಹೂಡಾ ಒಂದೆಡೆರಡು ಪಂದ್ಯಗಳಲ್ಲಿ ಮಿಂಚಿದ್ದಾರೆ. ಆದ್ರೆ ಅದನ್ನ ಮುಂದುವರೆಸಬೇಕಾಗಿದೆ. ಆಯುಷ್ ಬದೋನಿ ಕೂಡ ಮೊದಲಿನ ಟಚ್ ನಲ್ಲಿ ಕಾಣಿಸುತ್ತಿಲ್ಲ. ಜೇಸನ್ ಹೋಲ್ಡರ್ ಅವರಿಂದ ಕೂಡ ಆಲ್ ರೌಂಡರ್ ಆಟ ಬರಬೇಕಿದೆ. ಬೌಲಿಂಗ್ ನಲ್ಲಿ ಲಕ್ನೋ ತಂಡ ಬಲಿಷ್ಟವಾಗಿದೆ. ದುಷ್ಮಂತಾ ಚಮೀರಾ, ಮೊಹ್ನಿಸ್ ಖಾನ್, ಅವೇಶ್ ಖಾನ್ ವಿಕೆಟ್ ಪಡೆಯುತ್ತಿದ್ದಾರೆ. ಇವರಿಗೆ ಹೋಲ್ಡರ್, ಸ್ಟೋಯ್ನಿಸ್ ಸಾಥ್ ನೀಡಬೇಕಿದೆ. ರವಿ ಬಿಷ್ನೋಯಿ ದುಬಾರಿಯಾದ್ರೂ ವಿಕೆಟ್ ಪಡೆಯುತ್ತಿದ್ದಾರೆ.
lsg-vs-dc-match-preview- k l rahul vs rishab pant