LSG vs GT Match | ಅಗ್ರಸ್ಥಾನಕ್ಕಾಗಿ ದೋಸ್ತಿಗಳ ಕಾಳಗ
ಇಂಡಿಯನ್ ಪ್ರಿಮಿಯರ್ ಲೀಗ್ 57 ನೇ ಪಂದ್ಯದಲ್ಲಿ ಅಗ್ರಸ್ಥಾನಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿದೆ. ಕೆ.ಎಲ್ ರಾಹುಲ್ ನಾಯಕತ್ವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಈ ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು.
ಲಕ್ನೋ ಸೂಪರ್ ಜೈಂಟ್ಸ್ ತಂಡ 15ನೇ ಸೀಸನ್ ನಲ್ಲಿ ಈವರೆಗೂ 11 ಪಂದ್ಯಗಳನ್ನಾಡಿದೆ. ಈ ಪೈಕಿ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ರಾಹುಲ್ ಬಳಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತ ಹಾರ್ದಿಕ್ ಬಳಗ ಈ ಸೀಸನ್ ನಲ್ಲಿ 11 ಪಂದ್ಯಗಳನ್ನಾಡಿದೆ. ಈ ಪೈಕಿ ಗುಜರಾತ್ ತಂಡ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಅಂದಹಾಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸೆಣಸಿತ್ತು. ಇದರಲ್ಲಿ ಲಕ್ನೋ ತಂಡ 75 ರನ್ ಗಳಿಂದ ಜಯಸಾಧಿಸಿ ರನ್ ರೇಟ್ ಆಧಾರವಾಗಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೆಕೆಆರ್ ತಂಡದ ವಿರುದ್ಧ ಕ್ವಿಂಟನ್ ಡಿ ಕಾಕ್ 50 ರನ್, ದೀಪಕ್ ಹೂಡಾ 41 ರನ್ ಗಳಿಸಿದರು.
ಮತ್ತೊಂದು ಕಡೆ ಗುಜರಾತ್ ಟೈಟಾನ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಗುಜರಾತ್ ಐದು ರನ್ ಗಳಿಂದ ಸೋಲು ಕಂಡಿದೆ. ಇದರಲ್ಲಿ ವೃದ್ಧಿಮಾನ್ ಸಹಾ 55 ರನ್ ಮತ್ತು ಶುಭ್ ಮನ್ 52 ರನ್ ಗಳಿಸಿದ್ದರು. ಮುಂಬೈ ವಿರುದ್ಧ ಕೇವಲ ಐದು ರನ್ ಗಳಿಂದ ಸೋಲು ಕಂಡಿದ್ದು, ಗುಜರಾತ್ ಗೆ ಅಸಮಾಧಾನ ತಂದಿದ್ದು, ಇಂದಿನ ಪಂದ್ಯ ಗೆದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಪ್ಲಾನ್ ಮಾಡಿಕೊಂಡಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಲಕ್ನೋ ಸೂಪರ್ ಜೈಂಟ್ಸ್ ತಂಡ ಬಲಿಷ್ಠವಾಗಿದೆ. ಲಕ್ನೋ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸಾಲಿಡ್ ಆಗಿದೆ. ಆರಂಭಿಕರಾಗಿ ಬರುವ ಕೆ.ಎಲ್.ರಾಹುಲ್, ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡುತ್ತಿದ್ದಾರೆ. ಇದು ತಂಡದ ಪ್ಲಸ್ ಪಾಯಿಂಟ್ ಆಗಿದೆ. ಮಿಡಲ್ ಆರ್ಡರ್ ನಲ್ಲಿ ದೀಪಕ್ ಹೂಡಾ, ಕೃನಾಲ್ ಪಾಂಡ್ಯ ತಂಡಕ್ಕೆ ಆಧಾರವಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಫಾರ್ಮ್ ಗೆ ಬಂದಿರೋದು ತಂಡಕ್ಕೆ ಮತ್ತಷ್ಟು ಬೂಸ್ಟ್ ನೀಡಿದೆ. ಆಯುಷ್ ಬದೋನಿ ಮೊದಲಿನ ಟಚ್ ನಲ್ಲಿ ಕಾಣಿಸದೇ ಇದ್ದರೂ ಯಾವುದೇ ಹಂತದಲ್ಲಿ ಬ್ಲಾಸ್ ಆಗುವ ಸಾಮೃರ್ಥ್ಯ ಹೊಂದಿದ್ದಾರೆ. ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್ ಆಲ್ ರೌಂಡರ್ ಆಟವಾಡುತ್ತಿದ್ದಾರೆ. ಬೌಲಿಂಗ್ ನಲ್ಲಿ ಲಕ್ನೋ ತಂಡ ಬಲಿಷ್ಟವಾಗಿದೆ. ದುಷ್ಮಂತಾ ಚಮೀರಾ, ಮೊಹ್ನಿಸ್ ಖಾನ್, ಅವೇಶ್ ಖಾನ್ ವಿಕೆಟ್ ಪಡೆಯುತ್ತಿದ್ದಾರೆ. ಇವರಿಗೆ ಹೋಲ್ಡರ್, ಸ್ಟೋಯ್ನಿಸ್ ಸಾಥ್ ನೀಡಬೇಕಿದೆ. ರವಿ ಬಿಷ್ನೋಯಿ ದುಬಾರಿಯಾದ್ರೂ ವಿಕೆಟ್ ಪಡೆಯುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ ವಿಚಾರಕ್ಕೆ ಬಂದರೇ
ಸಂಘಟಿತ ಆಟದ ಜೊತೆ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಕೂಡ ಗುಜರಾತ್ ಟೈಟಾನ್ಸ್ ತಂಡದ ಯಶಸ್ವಿನ ಸಿಕ್ರೇಟ್ ಆಗಿದೆ. ಆರಂಭಿಕರಾದ ವೃದ್ದಿಮಾನ್ ಸಾಹಾ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಬ್ಯಾಡ್ ಫಾರ್ಮ್ ನಲ್ಲಿದ್ದ ಶುಬ್ಮನ್ ಗಿಲ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಒಳ್ಳೆ ಟಚ್ ಗೆ ಬಂದಿದ್ದಾರೆ. ಸಾಯಿ ಸುದರ್ಶನ್ ನಿರೀಕ್ಷೆಗೂ ಮೀರಿದ ಆಟವನ್ನಾಡುತ್ತಿದ್ದಾರೆ. ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಹಾರ್ದಿಕ್ ಪಾಂದ್ಯ ಆಡುತ್ತಿದ್ದಾರೆ. ಡೇವಿಡ್ ಮಿಲ್ಲರ್ ಸಮಯೋಚಿತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಇನ್ನೊಂದೆಡೆ ರಶೀದ್ ಖಾನ್ ಮತ್ತು ರಾಹುಲ್ ಟೆವಾಟಿಯಾ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲಿ ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮುತ್ತಿರುವುದು ತಂಡಕ್ಕೆ ವರದಾನವಾಗುತ್ತಿದೆ. ಹಾಗೇ ಬೌಲಿಂಗ್ ನಲ್ಲಿ ಅಲ್ಝಾರಿ ಜೊಸೇಫ್, ಲೂಕಿ ಫಗ್ರ್ಯುಸನ್ ಮಾರಕವಾಗಿ ಪರಿಣಮಿಸುತ್ತಿದ್ದಾರೆ. ಮಹಮ್ಮದ್ ಶಮಿ ಕಳೆದ ಪಂದ್ಯದಲ್ಲಿ ದುಬಾರಿಯಾದ್ರೂ ಅಪಾಯಕಾರಿ ವೇಗಿ ಎಂಬುದನ್ನು ಮರೆಯುವ ಹಾಗಿಲ್ಲ. ಈ ನಡುವೆ, ಪ್ರದೀಪ್ ಸಂಗ್ವಾನ್ ಮತ್ತು ಯಶ್ ದಯಾಲ್ ನಡುವೆ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲು ಪೈಪೋಟಿ ಇದೆ.
ಒಟ್ಟಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಾವುದೇ ರೀತಿಯ ಒತ್ತಡವಿಲ್ಲದೆ ಆಡಲಿದೆ. ಆದ್ರೂ ಗೆಲುವನ್ನು ಎದುರು ನೋಡುತ್ತಿದೆ. ಪ್ರಯೋಗಕ್ಕೆ ಮುಂದಾಗುವ ಯಾವುದೇ ಸಾಧ್ಯತೆಗಳಿಲ್ಲ. lsg-vs-gt-match-Gujarat Titans and Lucknow Super Giants look to seal playoff