LSG vs GT Match | ಸೇಡಿನ ಸಮರಕ್ಕೆ ಲಕ್ನೋ ತಂಡ ಸಜ್ಜು
ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ 15 ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ.
ಹೀಗಾಗಿ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಲಕ್ನೋ ತಂಡ, ಪ್ಲೇ ಆಫ್ಸ್ ಪ್ರವೇಶಿಸುವುದು ಪಕ್ಕಾ ಆಗಿದೆ.
ಆದ್ರೂ ಇನ್ನೋಂದು ಪಂದ್ಯ ಗೆದ್ದು ಅದನ್ನ ಅಧಿಕೃತಪಡಿಸಿಕೊಳ್ಳಲು ರಾಹುಲ್ ಬಳಗ ಪ್ಲಾನ್ ಮಾಡಿದೆ.
ಇಂದು ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇಡಿನ ಸಮರಕ್ಕೆ ಸಜ್ಜಾಗಿದ್ದು, ಗುಜರಾತ್ ಟೈಟಾನ್ಸ್ ವಿರುದ್ಧ ಗುದ್ದಾಟ ನಡೆಸಲಿದೆ.
ಇದು ಇಂಡಿಯನ್ ಪ್ರಿಮಿಯರ್ ಲೀಗ್ 57 ನೇ ಪಂದ್ಯವಾಗಿದ್ದು, ಅಗ್ರಸ್ಥಾನಕ್ಕಾಗಿ ಕಾಳಗವೂ ಹೌದು.. ಈ ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿದೆ.
ಕಳೆದ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಲಕ್ನೋ ಐದು ವಿಕೆಟ್ ಗಳಿಂದ ಸೋಲು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ಗುಜರಾತ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ 15ನೇ ಸೀಸನ್ ನಲ್ಲಿ ಈವರೆಗೂ 11 ಪಂದ್ಯಗಳನ್ನಾಡಿದೆ. ಈ ಪೈಕಿ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ ಪಂದ್ಯಗಳಲ್ಲಿ ಸೋಲು ಕಂಡಿದೆ.
ಇದರೊಂದಿಗೆ ಅಂಕಪಟ್ಟಿಯಲ್ಲಿ ರಾಹುಲ್ ಬಳಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸೆಣಸಿತ್ತು.
ಇದರಲ್ಲಿ ಲಕ್ನೋ ತಂಡ 75 ರನ್ ಗಳಿಂದ ಜಯಸಾಧಿಸಿ ರನ್ ರೇಟ್ ಆಧಾರವಾಗಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೆಕೆಆರ್ ತಂಡದ ವಿರುದ್ಧ ಕ್ವಿಂಟನ್ ಡಿ ಕಾಕ್ 50 ರನ್, ದೀಪಕ್ ಹೂಡಾ 41 ರನ್ ಗಳಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ತಂಡ ಬಲಿಷ್ಠವಾಗಿದೆ. ಲಕ್ನೋ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸಾಲಿಡ್ ಆಗಿದೆ.
ಆರಂಭಿಕರಾಗಿ ಬರುವ ಕೆ.ಎಲ್.ರಾಹುಲ್, ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡುತ್ತಿದ್ದಾರೆ. ಇದು ತಂಡದ ಪ್ಲಸ್ ಪಾಯಿಂಟ್ ಆಗಿದೆ. ಮಿಡಲ್ ಆರ್ಡರ್ ನಲ್ಲಿ ದೀಪಕ್ ಹೂಡಾ, ಕೃನಾಲ್ ಪಾಂಡ್ಯ ತಂಡಕ್ಕೆ ಆಧಾರವಾಗುತ್ತಿದ್ದಾರೆ.
ಕಳೆದ ಪಂದ್ಯದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಫಾರ್ಮ್ ಗೆ ಬಂದಿರೋದು ತಂಡಕ್ಕೆ ಮತ್ತಷ್ಟು ಬೂಸ್ಟ್ ನೀಡಿದೆ. ಆಯುಷ್ ಬದೋನಿ ಮೊದಲಿನ ಟಚ್ ನಲ್ಲಿ ಕಾಣಿಸದೇ ಇದ್ದರೂ ಯಾವುದೇ ಹಂತದಲ್ಲಿ ಬ್ಲಾಸ್ ಆಗುವ ಸಾಮೃರ್ಥ್ಯ ಹೊಂದಿದ್ದಾರೆ.
ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್ ಆಲ್ ರೌಂಡರ್ ಆಟವಾಡುತ್ತಿದ್ದಾರೆ. ಬೌಲಿಂಗ್ ನಲ್ಲಿ ಲಕ್ನೋ ತಂಡ ಬಲಿಷ್ಟವಾಗಿದೆ.
ದುಷ್ಮಂತಾ ಚಮೀರಾ, ಮೊಹ್ನಿಸ್ ಖಾನ್, ಅವೇಶ್ ಖಾನ್ ವಿಕೆಟ್ ಪಡೆಯುತ್ತಿದ್ದಾರೆ. ಇವರಿಗೆ ಹೋಲ್ಡರ್, ಸ್ಟೋಯ್ನಿಸ್ ಸಾಥ್ ನೀಡಬೇಕಿದೆ. ರವಿ ಬಿಷ್ನೋಯಿ ದುಬಾರಿಯಾದ್ರೂ ವಿಕೆಟ್ ಪಡೆಯುತ್ತಿದ್ದಾರೆ.
ಪ್ಲೇಯಿಂಗ್ ಇಲೆವೆನ್
ಕೆ.ಎಲ್.ರಾಹುಲ್
ಕ್ವಿಂಟನ್ ಡಿ ಕಾಕ್
ದೀಪಕ್ ಹೂಡಾ
ಆಯುಷ್ ಬಡೋನಿ
ಮಾರ್ಕಸ್ ಸ್ಟೋಯ್ನಿಸ್
ಜೇಸನ್ ಹೋಲ್ಡರ್
ಕೃಷ್ಣಪ್ಪ ಗೌತಮ್
ಕೃನಾಲ್ ಪಾಂಡ್ಯ
ದುಷ್ಮಂತಾ ಚಮೀರಾ
ಆವೇಶ್ ಖಾನ್
ರವಿ ಬಿಷ್ಣೋಯ್ನಿ
lsg-vs-gt-match-Lucknow Super Giants Probable XIs