MI vs LSG Match | ಲಕ್ನೋ ತಂಡದ Probable XIs
ಇಂಡಿಯನ್ ಪ್ರಿಮಿಯರ್ ಲೀಗ್ ನ 37 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದಿನ ಈ ಪಂದ್ಯ ನಡೆಯಲಿದೆ. ಮುಂಬೈ ಇಂಡಿಯನ್ಸ್ ತಂಡ ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಆವೃತ್ತಿಯಲ್ಲಿ ಏಳು ಪಂದ್ಯಗಳನ್ನಾಡಿದೆ.
ಈ ಪೈಕಿ ನಾಲ್ಕು ಪಂದ್ಯಗಳಲ್ಲಿ ಲಕ್ನೋ ತಂಡ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಖಾಮುಖಿಯಾಗಿತ್ತು.
ಈ ಪಂದ್ಯದಲ್ಲಿ ಬೆಂಗಳೂರು ತಂಡ 18 ರನ್ ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ರಾಹುಲ್ 30 ರನ್, ಕೃನಾಲ್ 45 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಲಕ್ನೋ ಸೂಪರ್ ಜೈಂಟ್ಸ್ ತಂಡ ಸಾಲಿಡ್ ಆಗಿದೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಆದ್ರೆ ಸಾಂಘೀಕ ಆಟ ಹಾಗೂ ಅನಾನುಭವಿ ಮಿಡಲ್ ಆರ್ಡರ್ ತಂಡದ ಹಿನ್ನೆಡೆಗೆ ಕಾರಣವಾಗುತ್ತಿದೆ.
ರಾಹುಲ್, ಡಿಕಾಕಾ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಮಿಡಲ್ ಆರ್ಡರ್ ನಲ್ಲಿ ಮನೀಷ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬಡೋನಿ ಸ್ಥಿರ ಪ್ರದರ್ಶನ ನೀಡಬೇಕಿದೆ.
ಕಳೆ ಕ್ರಮಾಂಕದಲ್ಲಿ ತಂಡ ಸಾಲಿಡ್ ಆಗಿದೆ. ಮಾರ್ಕಸ್ ಸ್ಟೋಯ್ನಿಸ್, ಜೇನಸ್ ಹೋಲ್ಡರ್, ಕೃನಾಲ್ ಪಾಂಡ್ಯ ತಂಡದ ಶಕ್ತಿಯಾಗಿದ್ದಾರೆ.
ಬೌಲಿಂಗ್ ನಲ್ಲಿ ಅವೇಶ್ ಖಾನ್, ದುಶ್ಮಾಂತಾ ಚಮ್ಮೀರಾ, ರವಿ ಬಿಷ್ನೋಯಿ ಒಳ್ಳೆ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪವರ್ ಪ್ಲೇನಲ್ಲಿ ಚಮೀರಾ ವಿಕೆಟ್ ಪಡೆಯುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಜೊತೆಗೆ ತಂಡದಲ್ಲಿ ಹೆಚ್ಚಿನ ಬೌಲಿಂಗ್ ಆಪ್ಷನ್ ಇರೋದು ಕೂಡ ಲಕ್ನೋ ತಂಡದ ಸ್ಟ್ರೆಂಥ್ ಆಗಿದೆ.
ಸದ್ಯ ತಂಡದಲ್ಲಿ ಯಾವುದೇ ಇಂಜೂರಿ ಸಮಸ್ಯೆ ಇಲ್ಲದಿರುವ ಕಾರಣ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆಗಳಾಗೋದು ತೀರಾ ಕಡಿಮೆ
ಲಕ್ನೋ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವನ್ ನೋಡೋದಾದ್ರೆ
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್ (ವಾಕ್), ಮನೀಶ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬಡೋನಿ, ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್
ಅಂದಹಾಗೆ ಕಳೆದ ಬಾರಿ ಮುಂಬೈ ವಿರುದ್ಧ ಲಕ್ನೋ ತಂಡ ಮುಖಾಮುಖಿಯಾಗಿದ್ದಾಗ 18 ರನ್ ಗಳಿಂದ ಗೆಲುವು ಸಾಧಿಸಿತ್ತು.