LSG vs PBKS Match | ಪಂಜಾಬ್ ತಂಡದ ಪ್ಲೇಯಿಂಗ್ 11
ಇಂಡಿಯನ್ ಪ್ರಿಮಿಯರ್ ಲೀಗ್ ನ 42 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮಹಾರಾಷ್ಟ್ರದ ಎಂಸಿಎ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಆವೃತ್ತಿಯಲ್ಲಿ ಉಭಯ ತಂಡಗಳು ಎರಡನೇ ಬಾರಿ ಎದುರುಬದುರು ಆಗುತ್ತಿವೆ.
ಮಯಾಂಕ್ ಅಗರ್ ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಪಂಜಾಬ್ 8 ಪಂದ್ಯಗಳನ್ನಾಡಿ ತಲಾ ನಾಲ್ಕು ಸೋಲು, ನಾಲ್ಕು ಗೆಲುವುಗಳನ್ನು ಕಂಡಿದೆ.
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಿದ್ದು, 11 ರನ್ ಗಳಿಂದ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಶಿಖರ್ 88 ರನ್, ರಾಜಪಕ್ಸೆ 42 ರನ್ ಸಿಡಿಸಿದ್ದರು.
ಪಂಜಾಬ್ ತಂಡಕ್ಕೆ ಸ್ಥಿರ ಆಟದ ಕೊರತೆ ಕಾಡುತ್ತಿದೆ. ಬ್ಯಾಟಿಂಗ್ ನಲ್ಲಿ ಶಿಖರ್ ಧವನ್ ಮೇಲೆ ತಂಡ ಹೆಚ್ಚು ಅವಲಂಭಿತವಾಗಿದೆ.
ಮಯಾಂಕ್ ಅಗರ್ ವಾಲ್, ಜಾನಿ ಬೈರ್ ಸ್ಟೋ ಲಿವಿಂಗ್ ಸ್ಟೋನ್ ಶಿಖರ್ ಗೆ ಸಾಥ್ ನೀಡಬೇಕಿದೆ.
ಇನ್ನು ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ ಇಂಪ್ರೆಸ್ಸೀವ್ ಆಗಿದ್ದು, ಅವರಿಗೆ ರಿಷಿ ಧವನ್, ಕಗಿಸೋ ರಬಾಡ, ಸಂದೀಪ್ ಶರ್ಮಾ ಸಾಥ್ ನೀಡಬೇಕಿದೆ.
ಪ್ಲೇಯಿಂಗ್ 11
ಪಂಜಾಬ್ ತಂಡ : ಮಯಾಂಕ್ ಅಗರ್ವಾಲ್ (c), ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (WK), ಭಾನುಕಾ ರಾಜಪಕ್ಸೆ, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಸಂದೀಪ್ ಶರ್ಮಾ, ಅರ್ಷ್ದೀಪ್ ಸಿಂಗ್
LSG vs PBKS Match Punjab team Playing 11








