LSG vs RCB Match | ಕ್ಯಾಚ್ ಬಿಟ್ಟು ಕೈ ಸುಟ್ಟುಕೊಂಡ ಲಕ್ನೋ
ಈಡರ್ನ್ಸ್ ಗಾರ್ಡರ್ನ್ ಮೈದಾನದಲ್ಲಿ ನಡೆದ ಈ ಸೀಸನ್ ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲು ಕಂಡಿದೆ.
ಇದೇ ಮೊದಲ ಬಾರಿಗೆ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದ ಕೆ.ಎಲ್.ರಾಹುಲ್ ನಾಯಕತ್ವ ಲಕ್ನೋ ಸೂಪರ್ ಜೈಂಟ್ಸ್ ತಂಡ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು.
ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಕಾಣಿಸಿಕೊಂಡರೂ ಟೈಟಲ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿತ್ತು. ಅದೇ ರೀತಿ ಮೊದಲಾರ್ಧ ಪಂದ್ಯಗಳಲ್ಲಿ ಪ್ರದರ್ಶನ ನೀಡಿದ ಲಕ್ನೋ ತಂಡ, ದ್ವಿತೀಯಾರ್ಧದಲ್ಲಿ ದಾರಿ ತಪ್ಪಿತ್ತು.
ಆದ್ರೂ ಪ್ಲೇ ಆಫ್ ಪ್ರವೇಶಿಸಿ ಟೈಟಲ್ ರೇಸ್ ನಲ್ಲಿ ಬೆಂಗಳೂರು ತಂಡದ ವಿರುದ್ಧ ಸೆಣಸಿ ಸೋಲು ಕಂಡಿದೆ. ಆ ಮೂಲಕ ನಿರಾಸೆಯೊಂದಿಗೆ 15 ನೇ ಆವೃತ್ತಿಯ ಅಭಿಯಾನ ಮುಗಿಸಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಅದೃಷ್ಠದ ಲಕ್ಷ್ಮಿ ಲಕ್ನೋ ತಂಡದ ಪರ ಇತ್ತು. ಆದ್ದರಿಂದಲೇ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈಡರ್ನ್ಸ್ ಗಾರ್ಡನ್ಸ್ ನಲ್ಲಿ ಚೇಸಿಂಗ್ ಮಾಡಿದ್ರೆ ಪಂದ್ಯಗಳನ್ನು ಗೆಲ್ಲುವ ಅವಕಾಶಗಳು ಹೆಚ್ಚಿವೆ.
ಇಲ್ಲಿ ಅದೃಷ್ಠದ ಲಕ್ಷ್ಮಿ ಲಕ್ನೋ ತಂಡದ ಪರವಾಗಿತ್ತು. ಅದರಂತೆ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಆರ್ ಸಿಬಿಯ ನಾಯಕ ಸಾರಥಿ ಫಾಫ್ ಡುಪ್ಲಸಿಸ್ ಅವರನ್ನ ಶೂನ್ಯಕ್ಕೆ ಔಟ್ ಮಾಡಿದರು. ಆ ಮೂಲಕ ಎದುರಾಳಿ ಮೇಲೆ ಲಕ್ನೋ ಒತ್ತಡ ಹೇರಿತ್ತು. ಈ ಹಂತದವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಲಕ್ನೋ ನಂತರ ಮೈ ಮರೆಯಿತು.

ಅದರಲ್ಲೂ ರಜತ್ ಪಟಿದಾರ್ ಅವರ ಧನಾಧನ್ ಇನ್ನಿಂಗ್ಸ್ ಗೆ ಬೆದರಿದ ಲಕ್ನೋ ಆಟಗಾರರು, ಫೀಲ್ಡಿಂಗ್ ಮಾಡುವುದನ್ನೇ ಮರೆತುಬಿಟ್ಟರು. ಉತ್ತಮವಾಗಿ ಆಡುತ್ತಿದ್ದ ಪಟಿದಾರ್ ಗೆ ಬರೋಬ್ಬರಿ ಮೂರು ಬಾರಿ ಜೀವದಾನ ನೀಡಿದರು. ಬಳಿಕ ದಿನೇಶ್ ಕಾರ್ತಿಕ್ ಕ್ಯಾಚ್ ಕೂಡ ಕೈಬಿಟ್ಟರು. ಇದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಒಂದು ವೇಳೆ ಈ ಕ್ಯಾಚ್ ಗಳನ್ನು ಲಕ್ನೋ ಆಟಗಾರರು ಪಡೆದುಕೊಂಡಿದ್ದರೇ ಪಂದ್ಯದ ರಿಸಲ್ಟ್ ಬೇರೆಯದ್ದೇ ಇರುತ್ತಿತ್ತು.
ಬೆಂಗಳೂರು ಇನಿಂಗ್ಸ್ 15 ಓವರ್ ನಲ್ಲಿ.. ದಿನೇಶ್ ಕಾರ್ತಿಕ್ ಸಿಕ್ಸರ್ ಬಾರಿಸುವ ಪ್ರಯತ್ನ ಮಾಡಿದ್ದರು. ಆಗ ಸರಿಯಾಗಿ ಟೈಮ್ ಆಗಿದೇ ಚೆಂಡು ಮಿಡ್ ಆಫ್ ಕವರ್ ಫೀಲ್ಡರ್ ನತ್ತ ಹೋಯ್ತು.
ಆಗ ಕೆ.ಎಲ್ ರಾಹುಲ್ ಆ ಕ್ಯಾಚ್ ಪಡೆಯುವಲ್ಲಿ ವಿಫಲರಾದರು. ಇದನ್ನ ಕಣ್ಣುಮಿಟುಕಿಸದೇ ನೋಡುತ್ತಿದ್ದ ಗಂಭೀರ್ ಡಗೌಟ್ ನಲ್ಲಿ ತೀವ್ರ ನಿರಾಸೆ ಅನುಭವಿಸಿದರು. ಇದಾದ ಬಳಿಕ 16 ಓವರ್ ನಲ್ಲಿ 72 ರನ್ ಗಳಿಸಿದ್ದಾಗ ರಜಿತ್ ಪಾಟಿದಾರ್ ಸುಲಭ ಕ್ಯಾಚ್ ನೀಡಿದ್ದರು. ಆಗ ದೀಪಕ್ ಹೂಡಾ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ಈ ತಪ್ಪುಗಳಿಂದಾಗಿ ಲಕ್ನೋ ತಂಡ ಇದೀಗ ಟೂರ್ನಿಯಿಂದ ಹೊರಬಿಟ್ಟಿದೆ.
lsg-vs-rcb-match-reasons why Lucknow lost the Eliminator








