Lumpy skin disease: ಜಾನುವಾರುಗಳ ಚರ್ಮ ಗಂಟು ರೋಗಕ್ಕೆ ಶೀಘ್ರವೇ ಲಸಿಕೆ – ಪ್ರಧಾನಿ..
2025 ರ ವೇಳೆಗೆ ಭಾರತದ ಎಲ್ಲಾ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗ (ಎಫ್‌ಎಂಡಿ) ಮತ್ತು ಬ್ರೂಸೆಲೋಸಿಸ್ ವಿರುದ್ಧ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭರವಸೆ ನೀಡಿದ್ದಾರೆ. ಲಂಪಿ ಅಥವಾ ಮುದ್ದೆ ಚರ್ಮದ ಕಾಯಿಲೆಯಿಂದ ಉಂಟಾಗುವ ಜಾನುವಾರುಗಳ ನಷ್ಟದ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ವಿವಿಧ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಲಂಪಿ ಚರ್ಮ ರೋಗದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ. ಇದರ ಜೊತೆಗೆ, ನಮ್ಮ ವಿಜ್ಞಾನಿಗಳು ಲಂಪಿ ಸ್ಕಿನ್ ಡಿಸೀಸ್‌ಗೆ ಸ್ಥಳೀಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ನಾವು ಪರೀಕ್ಷೆಯನ್ನು ಸಹ ಹೆಚ್ಚಿಸುತ್ತಿದ್ದೇವೆ ಎಂದು ಹೇಳಿದರು ”
ನೋಯ್ಡದಲ್ಲಿ ನಡೆದ ವಿಶ್ವ ಡೈರಿ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ, ಭಾರತ ಪ್ರಾಣಿಗಳ ಲಸಿಕೆಗೆ ಒತ್ತು ನೀಡುತ್ತಿದೆ ಎಂದು ಹೇಳಿದರು. “ನಾವು ಸಾರ್ವತ್ರಿಕ ಪ್ರಾಣಿಗಳ ಲಸಿಕೆಗೆ ಒತ್ತು ನೀಡುತ್ತಿದ್ದೇವೆ. 2025 ರ ವೇಳೆಗೆ ನಾವು ಎಲ್ಲಾ ಪ್ರಾಣಿಗಳಿಗೆ ಕಾಲು ಮತ್ತು ಬಾಯಿ ರೋಗ (FMD) ಮತ್ತು ಬ್ರೂಸೆಲ್ಲೋಸಿಸ್ ವಿರುದ್ಧ ಲಸಿಕೆಯನ್ನ ಹಾಕಲು ನಿರ್ಧರಿಸಿದ್ದೇವೆ. ಈ ದಶಕದ ಅಂತ್ಯದ ವೇಳೆಗೆ ಈ ರೋಗಗಳಿಂದ ಸಂಪೂರ್ಣವಾಗಿ ಮುಕ್ತರಾಗಲು ನಾವು ಆಶಿಸುತ್ತೇವೆ,” ಅವರು ಹೇಳಿದರು.
ಚರ್ಮದ ಗಂಟು ರೋಗ ಅಥವಾ ಮುದ್ದೆ ರೋಗ ಹಸು ಮತ್ತು ಎಮ್ಮೆಗಳಲ್ಲಿ ಮಾತ್ರ ಕಂಡು ಬಂದಿದೆ. ಈ ರೋಗ ಲಕ್ಷಣವಿರುವ ಪ್ರಾಣಿಯ ಹಾಲು ಅಥವಾ ಮಾಂಸ ಸೇವನೆಯಿಂದ ಮನಷ್ಯರಿಗೆ ಅಪಾಯವಿಲ್ಲವಾದರೂ ವೈರಸ್ ನಿಂದ ಹಾಲು ಕಲುಷಿತವಾಗುವಾಗುವ ಸಾಧ್ಯೆತೆ ಇದೆ.








