ನವೆಂಬರ್ 19ಕ್ಕೆ ಭಾಗಶಃ ಚಂದ್ರಗ್ರಹಣ : ಇದರ ವಿಶೇಷತೆ ಏನು ಗೊತ್ತಾ..? Lunar eclipse
ಇದೇ ನವೆಂಬರ್ 19 ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ.
ಈ ಭಾಗಶಃ ಚಂದ್ರಗ್ರಹಣವೂ ದೀರ್ಘಕಾಲದ ವರೆಗೂ ಇರಲಿದ್ದು, ಇದರ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡುಗಳು.
ಇಷ್ಟು ದೀರ್ಘಾವಧಿಯ ಈ ಭಾಗಶಃ ಚಂದ್ರಗ್ರಹಣವು 580 ವರ್ಷಗಳ ನಂತರ ಸಂಭವಿಸುತ್ತಿದೆ.
ಇದಕ್ಕೂ ಮೊದಲು 1440 ಫೆಬ್ರವರಿ 18 ರಂದು ಸಂಭವಿಸಿತ್ತು.
ಇದೇ ರೀತಿಯ ದೀರ್ಘಾವಧಿಯ ಚಂದ್ರಗ್ರಹಣವೂ 2669 ಫೆಬ್ರವರಿ 8, ರಂದು ಸಂಭವಿಸುತ್ತದೆ.
ಭಾರತದಲ್ಲಿ ನವೆಂಬರ್ 19 ರಂದು ಮಧ್ಯಾಹ್ನ 12:48 ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಲಿದ್ದು. ಸಂಜೆ 4:17 ರವರೆಗೆ ಗೋಚರಿಸುತ್ತದೆ.
ಇದು ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ. ಈ ಹಿಂದೆ ಮೇ 26ರಂದು ಚಂದ್ರಗ್ರಹಣ ಸಂಭವಿಸಿತ್ತು.
ಈ ಭಾಗಶಃ ಚಂದ್ರಗ್ರಹಣದ ನಂತರ 15 ದಿನಗಳ ಸಂಪೂರ್ಣ ಸೂರ್ಯಗ್ರಹಣ ಕೂಡ ಸಂಭವಿಸಲಿದೆ.









