M B Patil | ಬಿಜೆಪಿಯವರದ್ದು ವಿನಾಶ ಕಾಲೆ ವಿಪರೀತ ಬುದ್ದಿ
ಚಿತ್ರದುರ್ಗ : ಬಿಜೆಪಿಯವರದ್ದು ವಿನಾಶ ಕಾಲೆ ವಿಪರೀತ ಬುದ್ದಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸಿದ್ದು ಸುಲ್ತಾನ್ ಗೆ ಹೆದರಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ಪ್ರತಾಪ್ ಸಿಂಹರ ಭಾಷೆಯನ್ನು ಜನರು ತಡೆದುಕೊಳ್ಳಲ್ಲ.
ಬಿಜೆಪಿಯವರದ್ದು ವಿನಾಶ ಕಾಲೆ, ವಿಪರೀತ ಬುದ್ದಿ. ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆಯೋದರಿಂದ ಪರಿಣಾಮ ಏನಾಗಿದೆ ಎಂದು ಇವ್ರು ಊಹಿಸಿಲ್ಲ.
ಸಿದ್ದರಾಮಯ್ಯ ಶಕ್ತಿ ಏನು ಅಂತ ಇವರಿಗೆ ಅರ್ಥ ಆಗಿಲ್ಲ. ಸಿದ್ದರಾಮಯ್ಯ ಅವರ ದಾವಣಗೆರೆ ಕಾರ್ಯಕ್ರಮದಿಂದ ಬಿಜೆಪಿಗೆ ನಡುಕ ಹುಟ್ಟಿದೆ.
ರಾಜ್ಯದಲ್ಲಿ ಸಂಪೂರ್ಣ ಬಿಜೆಪಿ ನೆಲಕ್ಕೆ ಕುಸಿದಿದೆ. ಚುನಾವಣೆ ನಡೆದರೆ ೫೦ ಸೀಟ್ ಕೂಡ ಗೆಲ್ಲೋದಿಲ್ಲ ಎಂದು ನುಡಿದಿದ್ದಾರೆ.

ನಾವು ೧೩೦ರಿಂದ ೧೪೦ ಸ್ಥಾನ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರ ಅನುಭವಿಸಲು ಅಲ್ಲ, ಕರ್ನಾಟಕ ನಂಬರ್ ಒನ್ ಆಗಬೇಕು.
ಯುಪಿ ಮಾಡೆಲ್ ಅಂದ್ರೆ ಕೊನೆಯಿಂದ ಮೊದಲು ಬರ್ತೀವಿ, ನಮಗೆ ಕರ್ನಾಟಕ ಮಾಡೆಲ್ ಇಂಪಾರ್ಟೆಂಟ್ ಅವರಿಗೆ ಯುಪಿ ಮಾಡೆಲ್ ಇಂಪಾರ್ಟೆಂಟ್.
ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ ಬಿಜೆಪಿಯವರು ಇದರ ಬಗ್ಗೆ ಮಾತಾಡಲಿ. ಮೊಟ್ಟೆ ಎಸೆತ, ಹಿಜಾಬ್, ಪಠ್ಯ ಪರಿಷ್ಕರಣೆಯಿಂದ ತಿರುಚುವ ಕೆಲಸ.
ಇದರಿಂದ ಮತ್ತೆ ಅಧಿಕಾರಿಕ್ಕೆ ಬರುವ ಕನಸು ಕಾಣ್ತಿದ್ದಾರೆ. ಜನರು ಪ್ರಭುದ್ದರಾಗಿದ್ದಾರೆ ಇವರಿಗೆ ಪಾಠ ಕಲಿಸ್ತಾರೆ.
ಮೊಟ್ಟೆ ಎಸೆತ ಬಹಳ ಚಿಲ್ಲರೆ ಕೆಲ್ಸ ನಮಗೆ ಮಾಡೋಕ್ ಬರಲ್ವಾ, ಆದ್ರೆ ನಾವು ಮಾಡಲ್ಲ ಎಂದು ಹೇಳಿದ್ದಾರೆ..
ನಿನ್ನೆ ರಾತ್ರಿ ಹೋಗಿ ವಿಜಯಪುರದ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಹಚ್ಚಿದ್ದಾರೆ. ಕತ್ತಲಲ್ಲಿ ಹೋಗಿ ಪೋಸ್ಟರ್ ಹಚ್ಚೋದು ಅದೇನ್ ದೊಡ್ಡ ಕೆಲಸನಾ ?
ಕೊಡಗು ಚಲೋ ಹೋಗುವುದು ಆಡಳಿತ ಯಂತ್ರ ಕುಸಿದಿದೆ. ಇದಕ್ಕೆ ನಮ್ಮ ನಾಯಕರು ಎಲ್ಲರದ್ದೂ ಸಹಮತವಿದೆ.
ಕೊಡಗು ಚಲೋ ಕೇವಲ ಸಿದ್ದರಾಮಯ್ಯ ಅವರು ಹೇಳಿಲ್ಲ. ನಮ್ಮ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸೇರಿ ಎಲ್ಲರೂ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.








