ಕಾಂಗ್ರೆಸ್ ಪಾದಯಾತ್ರೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ – Saaksha Tv
ಬೆಂಗಳೂರು : ಕಾಂಗ್ರೆಸ್ ಪಕ್ಷದವರು ಮೇಕೆದಾಟು ಪಾದಯಾತ್ರೆ ಯಾಕೆ ಮಾಡುತ್ತಿದಾರೆ ಎಂಬುದು ಜಗತ್ತಿಗೇ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದನೇ ಹಂತದ ಪಾದಯಾತ್ರೆ ಯಾಕೆ ಆಯಿತು ಎಂದು ಗೊತ್ತಿದೆ. ಎರಡನೇ ಪಾದಯಾತ್ರೆ ಯಾಕೆ ನಡೆಯುತ್ತಿದೆ ಎಂಬುದೂ ಗೊತ್ತಿದೆ. ಮೊದಲು ಕಾಂಗ್ರೆಸ್ನವರು ಕೊರೊನಾ ನಿಯಮಗಳನ್ನು ಪಾಲನೆ ಮಾಡಲಿ ಎಂದು ಹೇಳಿದ್ದಾರೆ
ರಾಜಕೀಯಕ್ಕಾಗಿ ಅಧಿವೇಶನ ಹಾಳು ಮಾಡಿದ ಕಾಂಗ್ರೆಸ್ ಪಕ್ಷದವರು, ಸದನದ ಒಳಗೂ ಪ್ರತಿಭಟನೆ ಮಾಡಿದರು, ಈಗ ಹೊರಗಡೆ ಮಾಡುತ್ತಿದ್ದಾರೆ ಎಂದು ಕುಟುಕಿದರು.









