ವಿಡಿಯೋ ಪ್ರಸಾರ ಮಾಡದಂತೆ ರೇಣುಕಾಚಾರ್ಯ ಕೋರ್ಟ್ ಮೊರೆ
ಬೆಂಗಳೂರು : ಶಾಸಕ ಎಂ.ಪಿ ರೇಣುಕಾಚಾರ್ಯ ಅವರಿಗೆ ಸಿಡಿ ಭೀತಿ ಶುರುವಾಗಿದ್ದು, ತಮ್ಮ ವಿರುದ್ಧದ ಯಾವುದೇ ವಿಡಿಯೋ
ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಸಿಡಿ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ.
ನಾನು ಯಾವುದೇ ತಪ್ಪು ಮಾಡಿಲ್ಲ. ಯಾರೋ ಪುಣ್ಯಾತ್ಮ ರೇಣುಕಾಚಾರ್ಯ ವಿಡಿಯೋ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.
ಎಡಿಟಿಂಗ್ ಮೂಲಕ ಒಬ್ಬರ ಮುಖವನ್ನು ಮತ್ತೊಬ್ಬರಿಗೆ ಜೋಡಿಸಬಹುದು. ಈ ರೀತಿ ಮಾಡಿ ನನ್ನನ್ನು ಬ್ಲಾಕ್ ಮೇಲ್ ಖೆಡ್ಡಾಗೆ ಕೆಡವುವ ಯತ್ನ ನಡೆದಿದೆ.
ನನ್ನ ವಿರುದ್ಧದ ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಹಿಂದೊಮ್ಮೆ ನಾನು ತಪ್ಪು ಮಾಡಿದ್ದೆ ಎಂದು ಒಪ್ಪಿಕೊಂಡ ರೇಣುಕಾಚಾರ್ಯ, ಅಂದಿನ ತಪ್ಪಿನಿಂದ ಪಾಠ ಕಲಿತಿದ್ದೇನೆ.
ನಡೆಯುವ ಮನುಷ್ಯ ಎಡವುದು ಸಹಜ. ಮತ್ತೆಂದೂ ಆ ತಪ್ಪು ಮಾಡಿಲ್ಲ ಎಂದು ಹೇಳಿದರು.