M P Renukacharya : ಮಂತ್ರಿಗಿರಿ ಬಿಟ್ಟು ಮಾತಾಡಲಿ : ಸಚಿವರ ವಿರುದ್ಧ ವಾಗ್ದಾಳಿ m-p-renukacharya-B C Patil talk war bangalore
ಬೆಂಗಳೂರು : ಇವರಿಂದ ನಾನು ನೀತಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಅವರು ಒಂದು ಬಾರಿ ಮಂತ್ರಿಗಿರಿ ಬಿಟ್ಟು ಬಂದು ಮಾತಾಡಲಿ ಎಂದು ಸಚಿವರ ವಿರುದ್ಧ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
ಕಂಬಳಿಯಲ್ಲಿ ಕಲ್ಲು ಕಟ್ಟಿ ಹೊಡೆಯುವ ಬದಲು ಯಾವ ಸಚಿವರು ಎಂದು ಹೇಳಲಿ ಎಂಬ ಸಚಿವ ಬಿಸಿ ಪಾಟೀಲ್ ಹೇಳಿಕೆಗೆ ಬೆಂಗಳೂರಿನಲ್ಲಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಕುಂಬಳಕಾಯಿ ಕಳ್ಳ ಅಂದರೆ ಯಾಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕು ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ. ಯಾವ ಸಚಿವರು ಸ್ಪಂದಿಸಿಲ್ಲವೋ ಆ ಸಚಿವರ ಬಗ್ಗೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಶಾಸಕಾಂಗ ಪಕ್ಷದ ಸಭೆಯಲೂ ಕೆಲ ಸಚಿವರ ಬಗ್ಗೆ ಧ್ವನಿ ಎತ್ತಿದ್ದೇನೆ. ಆದರೆ ಇವರಿಂದ ನಾನು ನೀತಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಅವರು ಒಂದು ಬಾರಿ ಮಂತ್ರಿಗಿರಿ ಬಿಟ್ಟು ಬಂದು ಮಾತಾಡಲಿ ಎಂದು ಸವಾಲು ಹಾಕಿದರು.
ಇದೇ ವೇಳೆ ಸೋಮವಾರ ನಾನು ದೆಹಲಿಗೆ ಹೋಗ್ತಿದ್ದೇನೆ ಎಂದು ತಿಳಿಸಿದ ರೇಣುಕಾಚಾರ್ಯ, ದೆಹಲಿಗೆ ಹೋದಂತ ಸಂದರ್ಭದಲ್ಲಿ ನಾನು ನೂರಕ್ಕೆ ನೂರರಷ್ಟು ಸಚಿವರ ಬಗ್ಗೆ ಹೇಳೇ ಹೇಳ್ತೇನೆ. ಸಚಿವರ ಕಾರ್ಯವೈಖರಿ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.