ತಪ್ಪಿನ ಅರಿವಾಗಿದೆ, ಯಾವುದೇ ಷಡ್ಯಂತ್ರಕ್ಕೂ ನಾನು ಹೆದರುವುದಿಲ್ಲ : ರೇಣುಕಾಚಾರ್ಯ
ಬೆಂಗಳೂರು : ಜೀವನದಲ್ಲಿ ಹಿಂದೆ ಮಾಡಿದ್ದ ತಪ್ಪಿನ ಅರಿವಾಗಿದೆ. ಹಾಗಾಗಿ, ಸಿಡಿಯಂತಹ ಷಡ್ಯಂತ್ರದಲ್ಲಿ ಸಿಲುಕುವ ವ್ಯಕ್ತಿ ನಾನಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ತಮ್ಮ ವಿರುದ್ಧ ಸಿಡಿ ಕೇಸ್ ಇದೆ ಎಂಬ ವಿಚಾರವಾಗಿ ನವದೆಹಲಿಯಲ್ಲಿ ಮಾತನಾಡಿದ ಅವರು, ಸಿಡಿ ಸೇರಿದಂತೆ ಯಾವುದೇ ಷಡ್ಯಂತ್ರಕ್ಕೂ ನಾನು ಹೆದರುವುದಿಲ್ಲ.
ಹಿಂದೆ ಜೀವನದಲ್ಲಿ ಯಾವ ತಪ್ಪು ಮಾಡಿದ್ದೆ, ಆ ತಪ್ಪಿನ ಅರಿವು ನನಗಾಗಿದೆ. ಹಾಗಾಗಿ ಷಡ್ಯಂತ್ರಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ. ನಾನು ತಪ್ಪು ಮಾಡಿದ್ರೆ, ನನ್ನ ಕುಟುಂಬ ಸದಸ್ಯರು ಕೇಳುತ್ತಾರೆ. ಶಿಕ್ಷ ಕೊಡುತ್ತಾರೆ ಎಂದರು.
ಇನ್ನು ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ, ಈ ರಾಜಕಾರಣದಲ್ಲಿ ನಾನು ಯಾವತ್ತೂ ಅದೆಕ್ಕೆಲ್ಲಾ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ನಾನು ನಾನಾಗಿಯೇ ಇರುತ್ತೇನೆ, ಯಾವತ್ತೂ ವಿಚಲಿತನಾಗಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.