ಮಂತ್ರಿಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ : `ಸೈನಿಕ’ನ ಪರ ರೇಣುಕಾಚಾರ್ಯ ಬ್ಯಾಟ್
ಬೆಂಗಳೂರು : ಶಾಸಕರು ದೆಹಲಿಗೆ ಹೋದರೇ ತಪ್ಪೇನಿದೆ..? ಶಾಸಕರು ಮಂತ್ರಿ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ..? ಎಂದು ಹೇಳುವ ಮೂಲಕ ಶಾಸಕ ಎಂ ಪಿ ರೇಣುಕಾಚಾರ್ಯ, ಸಿ ಪಿ ಯೋಗೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ.
ಈ ಹಿಂದೆ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಈಗ ಸಾಫ್ಟ್ ಆಗಿದ್ದಾರೆ. ನಿನ್ನೆ ಸಿಪಿವೈ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ, ಕ್ಷೇತ್ರದ ಕೆಲಸ, ವೈಯಕ್ತಿಕ ಕೆಲಸಕ್ಕಾಗಿ ಶಾಸಕರು ದೆಹಲಿಗೆ ಹೋದರೇ ತಪ್ಪೇನಿದೆ..? ಶಾಸಕರು ಮಂತ್ರಿ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ..? ಆದರೆ ಅಂತಿಮವಾಗಿ ಸಚಿವ ಸ್ಥಾನ ಕೊಡುವುದು ಸಿಎಂ ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರ ಎಂದಿದ್ದಾರೆ.
ಅಂದಹಾಗೆ ಈ ಹಿಂದೆ ಸಿಪಿಐ ದೆಹಲಿಗೆ ಭೇಟಿ ಕೊಟ್ಟಾಗ ಫುಲ್ ಗರಂ ಆಗಿದ್ದ ರೇಣುಕಾಚಾರ್ಯ, ಸೋತವರು ಮಂತ್ರಿ ಸ್ಥಾನಕ್ಕಾಗಿ ದೆಹಲಿ ಅಲೆಯುತ್ತಿದ್ದಾರೆ ಎಂದಿದ್ದರು. ಆದ್ರೆ ಈಗ ದೆಹಲಿಗೆ ಹೋದರೆ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಯೋಗೇಶ್ವರ್ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನು ರೇಣುಚಾಕಾರ್ಯ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆದ್ರೆ ಕೊನೆ ಕ್ಷಣದಲ್ಲಿ ರೇಣುಕಾಚಾರ್ಯ ಅವರಿಗೆ ಮಂತ್ರಿಗಿರಿ ತಪ್ಪಿದೆ. ಇದಕ್ಕೆ ರೇಣುಕಾಚಾರ್ಯ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.









