“ತಾನಿದ್ದ ಪಕ್ಷದ ವಿರುದ್ಧ ಮಾತನಾಡೋದೇ ಹೆಚ್.ವಿಶ್ವನಾಥ್ ಕೆಲಸ” : ರೇಣುಕಾಚಾರ್ಯ ಗರಂ
ಬೆಂಗಳೂರು : ತಾನಿದ್ದ ಪಕ್ಷದ ವಿರುದ್ಧ ಮಾತನಾಡೋದೇ ಹೆಚ್.ವಿಶ್ವನಾಥ್ ಕೆಲಸ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪನವರ ವಯಸ್ಸಿನ ಬಗ್ಗೆ ಮಾತನಾಡಿದ ಎಂಎಲ್ ಸಿ ಹೆಚ್ ವಿಶ್ವನಾಥ್ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಫುಲ್ ಗರಂ ಆಗಿದ್ದಾರೆ.
ಹೆಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪರ ವಯಸ್ಸನ್ನ ಪ್ರಶ್ನೆ ಮಾಡೋ ವಿಶ್ವನಾಥ್ ನಿಮ್ಮ ವಯಸ್ಸೆಷ್ಟು ಅನ್ನೋದು ನೆನಪಿದೆಯಾ..?
ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಏನಿದೆ..? ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿದವರು ನೀವು.
ಕಾಂಗ್ರೆಸ್ ನಿಮಗೆ ಎಲ್ಲಾ ಅಧಿಕಾರ ನೀಡಿದ್ರೂ ಅಲ್ಲಿಂದ ಹೊರ ಬಂದಿರಿ, ಜೆಡಿಎಸ್ ರಾಜ್ಯಾಧ್ಯಕ್ಷನ ಸ್ಥಾನ ನೀಡಿದರೂ ಸಹ ದೇವೇಗೌಡರಿಗೆ ಮೋಸ ಮಾಡಿದ್ದೀರಾ…?
ಇದೀಗ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದೀರಾ. ತಾನಿದ್ದ ಪಕ್ಷದ ವಿರುದ್ಧ ಮಾತನಾಡೋದೇ ಹೆಚ್.ವಿಶ್ವನಾಥ್ ಕೆಲಸ ಎಂದು ಗುಡುಗಿದರು.
ಮುಂದುವರೆದು ಹೆಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ವಲಸಿಗ ಸಚಿವರು ಯಡಿಯೂರಪ್ಪರ ಪರವಾಗಿ ಇದ್ದಾರೆ. ಆದರೆ ಸೋತ ವಿಶ್ವನಾಥ್ ರನ್ನ ಯಡಿಯೂರಪ್ಪರೇ ಎಂಎಲ್ಸಿ ಮಾಡಿದ್ದರೂ ಸಹ ವಿಶ್ವನಾಥ್ ಅವರ ವಿರುದ್ಧವೇ ಮಾತನಾಡ್ತಾರೆ. ಇವರು ತಮಗೆ ಮಂತ್ರಿಗಿರಿ ಸಿಕ್ಕಿಲ್ಲ ಎಂದು ಹತಾಶರಾಗಿದ್ದಾರೆ ಎಂದು ಲೇವಡಿ ಮಾಡಿದರು.