“ ಕ್ರೌರ್ಯದಲ್ಲಿ ಶಾಂತಿ ಇಷ್ಟ.. ದ್ವೇಷದಲ್ಲಿ ತಾಳ್ಮೆನೆ ಇಷ್ಟ… ಊಟದಲ್ಲಿ ಎಲೆಗಳನ್ನ ಲೆಕ್ಕ ಹಾಕಬಾರ್ದು , ಸಾವಿನಲ್ಲಿ ತಲೆಗಳನ್ನ ಲೆಕ್ಕ ಹಾಕ್ಬಾರ್ದು… ಅಂತ ನರಕ ತೋರಿಸೋಕೆ ಹೊರಟಿದ್ದಾನೆ… ತಾಂಡವ..”
ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಬಹುನಿರೀಕ್ಷೆಯ ಮದಗಜ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ.. 30 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದು ಮುನ್ನುಗುತ್ತಿದೆ.. ಟ್ರೇಲರ್ ನೋಡ್ದೋರೆಲ್ಲಾ ಬೆಂಕಿಯಂತೆ ಅಬ್ಬರಿಸಿರುವ ರೋರಿಂಗ್ ಸ್ಟಾರ್ ಗೆ ಬಹುಪರಾಕ್ ಹೇಳ್ತಿದ್ದಾರೆ.. ಇನ್ನೂ ಟ್ರೇಲರ್ ನಲ್ಲಿ ಮೊದಲಿಗೆ ಅಪ್ಪು ಅವರಿಗೆ ಗೌರವ ಸಲ್ಲಿಸಲಾಗಿದೆ..
ಅಬ್ಬಬ್ಬಾ ಏನ್ ಟ್ರೇಲರ್ ಗುರು ಅಂತ ಜೈಕಾರ ಹಾಕ್ತಾಯಿದ್ದಾರೆ.. ಸಿನಿಮಾದಲ್ಲಿ ವಿಲ್ಲನ್ ಆಗಿ ಜಗಪತಿ ಬಾಬು ಕ್ರೌರ್ಯ ಎಷ್ಟು ಭಯಾನಕ ಅನ್ನೋದಕ್ಕೆ ತಿಳಿಯೋಕೆ ಟ್ರೇಲನ್ ನ ಒಂದು ಝಳಕ್ ಸಾಕು.. ಮದಗಜ ಟ್ರೇಲರ್ ಒಂದ್ ಮಾತಲ್ಲಿ ಹೇಳೋದಾದ್ರೆ ಇದು ರಣ ಮಾಸ್…
ಅಷ್ಟೇ ಅಲ್ಲ ನೆಟ್ಟಿಗರು ಕನ್ನಡದ ಇನ್ನೊಂದು KGF ಅಂತನೂ ಬಿಂಬಿಸ್ತಿದ್ದಾರೆ.. ಯಾಕಂದ್ರೆ ರವಿ ಬಸ್ರೂರು ಬಿಗಿಎಮ್ ಪವರ್ , ಸೆಟ್ , ಲೊಕೇಶನ್ , ವಿಶುವಾಲಿಟಿ ಅದೇ KGF ಪವರ್ ನ ನೆನಪು ಮಾಡಿಕೊಡ್ತಿದೆ.. ಟ್ರೇಲರ್ ಸಖತ್ ರೋಮಾಂಚನಕಾರಿಯಾಗಿದ್ದು, ಕ್ಷಣಕ್ಷಣಕ್ಕೂ ಹಾರ್ಟ್ ಬೀಟ್ಸ್ ಹೆಚ್ಚಿಸುತ್ತದೆ.. ಕ್ರೌರ್ಯದ ಜೊತೆಗೆ ಮುರುಳಿ ತಾಯಿಯ ಮುಂದೆ ಒಬ್ಬ ಪುಟ್ಟ ಬಾಲಕನಂತೆ ಇರುತ್ತಾನೆ.. ಪಕ್ಕಾ ತಾಯಿಗೆ ತಕ್ಕ ಮಗ ಎನ್ನುವುದು ಟ್ರೇಲರ್ ನೋಡಿದ್ರೆ ಗೊತ್ತಾಗ್ತಿದೆ..
ಅದ್ರಲ್ಲೂ ಶ್ರೀಮುರುಳಿ ಲುಕ್ ಏನ್ ಟೆರರ್ ಗುರು ಅಂತಿದ್ದಾರೆ.. KGF ಖ್ಯಾತಿಯ ಗರುಡನ ಸೀನ್ಸ್ ಕೂಡ ನಿಜಕ್ಕೂ ಬೆಂಕಿ ಆಗಿದೆ.. ಕೆಜಿಎಫ್ ನಲ್ಲಿ ದಾಡಿ ಬಿಟ್ಟು ರಗಡ್ ಲುಕ್ ನಲ್ಲಿ ಒಬ್ಬ ಖತರ್ನಾಕ್ ವಿಲ್ಲನ್ ಆಗಿ ಕಾಣಿಸಿಕೊಂಡಿದ್ದ ರಾಮ್ ಅವರು ಈ ಸಿನಿಮಾದಲ್ಲಿ ಅದೇ ಲುಕ್ ನ ಕ್ಯಾರಿ ಮಾಡಿರೋದು ವಿಶೇಷ..
KGF ಅಷ್ಟೇ ಅಲ್ಲ ಉಗ್ರಂನ ಫೀಲ್ ಕೊಡ್ತಿದೆ ಈ ಟ್ರೇಲರ್.. ಅದ್ರಲ್ಲೂ ಡೈಲಾಗ್ಸ್ ಗಳು ಮಾತ್ರ ಸೂಪರ್ರೋ ಸೂಪರ್ ಅಂತಿದ್ದಾರೆ ಕಮೆಂಟಿಗರು.. ಅಷ್ಟೇ ಅಲ್ಲ ರೋರಿಂಗ್ ಸ್ಟಾರ್ ಶ್ರೀಮುರುಳಿ ಡೈಲಾಗ್ಸ್ ಕಡಿಮೆ ಹೊಡೆದ್ರು , ಮಾತು ಹೆಚ್ಚಾಗಿ ಆಡೋದಿಲ್ಲ ಅಂದ್ರು ಅವರ ಸೈಲೆನ್ಸ್ ನಲ್ಲೇ ಆ ಪವರ್ ಕಣ್ಣಿಗೆ ಕುಕ್ಕುವಂತೆ ಮಾಡುತ್ತೆ.. ಜಗಪತಿ ನೋಡಿದ್ರೇ ಸಾಕು ಎದೆಯಲ್ಲಿ ನಡುಕ ಹುಟ್ಟಿಸುತ್ತೆ..
ಇನ್ನೂ ಟ್ರೇಲರ್ ಕ್ವಾಲಿಟಿ ಅಲ್ಟಿಮೇಟಾಗಿದೆ.. ರವಿ ಬಸ್ರೂರು ಬಿಜಿಎಂ ಬಗ್ಗೆ ಹೇಳೋದೆ ಬೇಡ.. ಅದಂತು ನೆಕ್ಸ್ಟ್ ಲೆವೆಲ್.. ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ಅವರ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ.. ಅವರ ನಿರ್ದೇಶನದಲ್ಲಿ ಸ್ಕ್ರೀನ್ ಪ್ಲೇ ನಿಜಕ್ಕೂ ಅಧ್ಬುತವಾಗಿದೆ ಅಂತ ಕೇವಲ ನಾವು ಟ್ರೇಲರ್ ನೋಡಿಯೇ ಹೇಳಬಹುದು..
ಸಿನಿಮಾದ ಮೇಲಿನ ನಿರೀಕ್ಷೆ ಕಾತರತೆಯನ್ನೂ ಈ ಟ್ರೇಲರ್ ದುಪ್ಪಟ್ಟಾಗಿಸಿದೆ.. ಕ್ಯಾಮೆರಾ ವರ್ಕ್ ಅಂತೂ ಅಧ್ಬುತವಾಗಿ ಮೂಡಿಬಂದಿದೆ.. ಡಿಸೆಂಬರ್ 3 ಕ್ಕೆ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತೆ..