ಡಿಸೆಂಬರ್ ನಲ್ಲಿ ತೆರೆಗೆ ಬರಲಿರುವ ಕನ್ನಡದ ಸಿನಿಮಾಗಳ ಪಟ್ಟಿ..!
ಸ್ಯಾಂಡಲ್ ವುಡ್ ಪಾಲಿಗೆ ಡಿಸೆಂಬರ್ ತುಂಬಾ ಲಕ್ಕಿ ಅಂತಲೇ ಪರಿಗಣಿಸಲಾಗಿದೆ.. ಅದ್ರಲ್ಲೂ ಕಳೆದೆರೆಡು ವರ್ಷಗಳಿಂದ ಕೊರೊನಾ ಹಾವಳಿಯಿಂದಾಗಿ ಸಿನಿಮಾರಂಗ ಪೆಟ್ಟು ತಿಂದಿತ್ತು.. ಇದೀಗ ಮತ್ತೆ ಸಿನಿಮಾಗಳ ರಿಲೀಸ್ ಪರ್ವ ಆರಂಭವಾಗಿದೆ.. ನವೆಂಬರ್ ನಲ್ಲಿ ಕನ್ನಡದ ಸುಮಾರು 16 ಸಿನಿಮಾಗಳು ರಿಲೀಸ್ ಆಗಿದ್ದವು.. ಡಿಸೆಂಬರ್ ತಿಂಗಳೂ ಇನ್ನೇನು ಬಂದೇ ಬಿಡ್ತು.. ಡಿಸೆಂಬರ್ ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಲಿವೆ..
ಆರಂಭದಲ್ಲೇ ಸಿನಿಮಾಮಂದಿರಗಳಲ್ಲಿ ಕಿಚ್ಚು ಹೊತ್ತಿಸಲು ಬರುತ್ತಿದ್ದಾನೆ ’ ಮದಗಜ’..!
ಡಿಸೆಂಬರ್ 3ರಂದು ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ಮದಗಜ ಸಿನಿಮಾ ರಿಲೀಸ್ ಆಗ್ತಿದೆ.. ತೆಲುಗು , ಕನ್ನಡ ತಮಿಳು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಲಿದೆ..
ಡಿಸೆಂಬರ್ 10ರಂದು ಮೂರು ಪ್ರಮುಖ ಸಿನಿಮಾಗಳ ನಡುವೆ ಪೈಪೋಟಿ..!
ಶರಣ್ ನಟನೆಯ ‘ಅವತಾರ ಪುರುಷ’ ತೆರೆಗೆ ಅಪ್ಪಳಿಸಲಿದೆ..
ಅಜಯ್ ರಾವ್ ಹಾಗೂ ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ಸಿನಿಮಾ ಕೂಡ ಡಿಸೆಂಬರ್ 10ಕ್ಕೆ ರಿಲೀಸ್ ಆಗಲಿದೆ..
ಇನ್ನೂ ಅದೇ ದಿನ ಸಹ ಅದೇ ದಿನ ಬಿಡುಗಡೆ ಆಗಲಿದೆ. ರವಿಚಂದ್ರನ್ ನಟನೆಯ ‘ದೃಶ್ಯ 2’ ಸಿನಿಮಾ ಬಿಡುಗಡೆಯಾಗ್ತಿದೆ..
ಡಿಸೆಂಬರ್ 24ರಂದು ಎರಡು ಪ್ರಮುಖ ಸಿನಿಮಾಗಳ ನಡುವೆ ಕಾದಾಟ..!
ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆ ಆಗಲಿದೆ.
ಅದೇ ದಿನವೇ ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಸಹ ಬಿಡುಗಡೆ ಆಗಲಿದೆ.
ಇದೆಲ್ಲದರ ನಡುವೆ ಕೆಲ ಪ್ಯಾನ್ ಇಂಡಿಯಾ ಬಹುನಿರೀಕ್ಷಿತ ಸಿನಿಮಾಗಳು ಕೂಡ ದೇಶಾದ್ಯಂತ ಹಾಗೂ ಕರ್ನಾಟಕದಲ್ಲೂ ರಿಲೀಸ್ ಆಗ್ತಿವೆ…
ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ ನಟನೆಯ ‘ಮರಕ್ಕರ್’. ಸಿನಿಮಾ ಡಿಸೆಂಬರ್ 02ರಂದು ಕನ್ನಡ ಸೇರಿದಂತೆ ಒಟ್ಟು ಭಾಷೆಗಳಲ್ಲಿ ರಿಲೀಸ್ ಆಗ್ತಿದೆ..
ಇನ್ನು ಡಿಸೆಂಬರ್ 17ಕ್ಕೆ ಅಲ್ಲು ಅರ್ಜುನ್ – ರಶ್ಮಿಕಾ ಮಂದಣ್ಣ ಹಾಗೂ ಡಾಲಿ ಧನಂಜಯ್ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾ ಸಹ ಕನ್ನಡ , ತೆಲುಗು ಸೇರಿದಂತೆ ಐದೂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ರಣ್ವೀರ್ ಸಿಂಗ್ ನಟನೆಯ ’83’ ಡಿಸೆಂಬರ್ 24ಕ್ಕೆ ಬಿಡುಗಡೆ ಆಗ್ತಿದೆ.. ಇದು ಕೂಡ ಕನ್ನಡದಲ್ಲಿ ಡಬ್ ಆಗಿ ಬರುತ್ತಿದೆ ಎನ್ನಲಾಗಿದೆ..