ಬಾಕ್ಸ್ ಆಫೀಸ್ ನಲ್ಲಿ ಘೀಳಿಟ್ಟ ಮದಗಜ Madagaja saaksha tv
ಯಾವುದೇ ಸಿನಿಮಾ ಇಂಡಸ್ಟ್ರೀ ಆಗಿರಲಿ. ಒಬ್ಬ ಸ್ಟಾರ್ ಹೀರೋ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡುತ್ತೆ ಅನ್ನುವುದು ಪ್ರತಿಷ್ಟೆಯ ವಿಷಯವಾಗಿತ್ತದೆ. ಸಿನಿಮಾ ಚೆನ್ನಾಗಿರಲಿ.. ಬಿಡಲಿ.. ಚಿತ್ರದ ಬಗ್ಗೆ ಯಾರು ಏನೇ ಅಂದರೂ, ಮೊದಲ ಮೂರು ದಿನ ದಾಖಲೆ ಗಳಿಕೆ ಮಾಡಿದರೆ, ಆ ಹೀರೊ ಗೆದ್ದಂತೆ.
ಹಾಗೇ ನೋಡಿದ್ರೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸ್ಯಾಂಡಲ್ ವುಡ್ ನಲ್ಲಿ ಓಡುವ ಕುದುರೆ. ಶ್ರೀ ಮುರಳಿ ಸಿನಿಮಾ ಅಂದ್ರೆ ಮಿನಿಮಮ್ ಗ್ಯಾರಂಟಿ ಕೊಡಬಹುದು. ಸಿನಿಮಾ ಕೊಂಚ ಚೆನ್ನಾಗಿದ್ದರೇ ಸಾಕು ನಿರ್ಮಾಪಕರು ಸೇಫ್ ಆಗಿಬಿಡುತ್ತಾರೆ. ಹಾಗಾದ್ರೆ ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ‘ಮದಗಜ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡುತ್ತಿದೆಯಾ? ನಿರ್ಮಾಪಕರ ಜೇಬು ತುಂಬಿಸಿದ್ಯಾ? ಅನ್ನೋ ಕುತೂಹಲಕಾರಿ ಪ್ರಶ್ನೆಗಳು ಸಿನಿ ಪ್ರಿಯರಲ್ಲಿ ಇದ್ದೆ ಇರುತ್ತವೆ.
ಅಂದಹಾಗೇ ಪಕ್ಕಾ ಮಾಸ್ ಎಂಟರ್ ಟೈನರ್ ಆಗಿರುವ ಮದಗಜ ಸಿನಿಮಾಗೆ ಮಾಸ್ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸ ಕಥೆಗಾಗಿ ಸಿನಿಮಾ ನೋಡೋರು ಓಕೆ ಓಕೆ ಅಂದಿದ್ದಾರೆ.
ರೊಮ್ಯಾಂಟಿಕ್ ಸಿನಿಮಾ ಇಷ್ಟ ಪಡೋರಿಗೆ ಮದಗಜ ಇಷ್ಟ ಆಗಿಲ್ಲ. ಹಾಗಂತ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಮದಗಜ ಸೈಲೆಂಟ್ ಆಗಿಲ್ಲ. ಬದಲಾಗಿ ತುಸು ಜೋರಾಗಿಯೇ ಘೀಳಿಟ್ಟಿದ್ದಾನೆ.
ಶ್ರೀಮುರುಳಿ ಸಿನಿಮಾ ಆಗಿರುವುದರಿಂದ ರಾಜ್ಯದಾದ್ಯಂತ ಸಿನಿಮಾಗೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅದೇ ರೀತಿ ಎರಡನೇ ದಿನವೂ ಮದಗಜ ಶೋಗಳು ಹೌಸ್ ಫುಲ್ ಆಗಿವೆ.
ಮದಗಜ’ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 7.82 ಕೋಟಿ ರೂಪಾಯಿ ಆಗಿದ್ದರೇ ಎರಡನೇ ದಿನ 5.64 ಕೋಟಿ ಬಾಚಿದೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಶ್ರೀಮುರಳಿಯ ‘ಮದಗಜ’ ಮೊದಲ ಎರಡು ದಿನ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಎರಡು ದಿನಕ್ಕೆ ಹಾಕಿದ ಅರ್ಧ ಬಂಡವಾಳ ವಾಪಸ್ ಬಂದಿದೆ. ಚಿತ್ರತಂಡ ಕೊಟ್ಟಿರುವ ಲೆಕ್ಕಾಚಾರದ ಪ್ರಕಾರ, ಸಿನಿಮಾ ಎರಡು ದಿನಗಳಲ್ಲಿ 13.46 ಕೋಟಿ ರೂಪಾಯಿ ಲೂಟಿ ಮಾಡಿದೆ.
ಇನ್ನೊಂದು ಮಾಹಿತಿಯ ಪ್ರಕಾರ ಮೂರನೇ ದಿನ ಭಾನುವಾರ ಆಗಿರುವುದರಿಂದ ಮೈಸೂರು, ಮಂಡ್ಯ, ಚಿತ್ರದುರ್ಗ, ಹುಬ್ಬಳ್ಳಿ, ಹರಿಹರದಲ್ಲಿ ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ. ಹೀಗಾಗಿ ಭಾನುವಾರ ಕಲೆಕ್ಷನ್ 6 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗುತ್ತಿದೆ. ಇದರ ಲೆಕ್ಕಾಚಾರದಲ್ಲಿ ಮದಗಜ ಸಿನಿಮಾ ಮೂರೇ ದಿನದಲ್ಲಿ 20 ಕೋಟಿ ಬಾಚಿದೆ.