ಜ. 18ಕ್ಕೆ ‘ಮದಯಾನೈ’ ಆಗಿ ತಮಿಳಿನಲ್ಲಿ ಬರ್ತಿದ್ದಾರೆ ರೋರಿಂಗ್ ಸ್ಟಾರ್..!
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಟೀಸರ್ ಕನ್ನಡ ಹಾಗೂ ತೆಲುಹಗಿನಲ್ಲಿ ರಿಲೀಸ್ ಆಗಿ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಇದೀಗ ತಮಿಳಿನಲ್ಲೂ ಟೀಸರ್ ರಿಲೀಸ್ ಮಾಡುವ ಡೇಟ್ ರಿವೀಲ್ ಮಾಡಿದೆ ಚಿತ್ರತಂಡ. ತಮಿಳಿನಲ್ಲಿ `ಮದಯಾನೈ’ ಆಗಿ ಬರ್ತಿರೋ ಸಿನಿಮಾದ ಟೀಸರ್ ಇದೇ ತಿಂಗಳು 18ಕ್ಕೆ ರಿಲೀಸ್ ಆಗಲಿದೆ.
ಶ್ರೀ ಮುರುಳಿ ಬರ್ತ್ ಡೇ ಗೆ ಕನ್ನಡದಲ್ಲಿ ಟೀಸರ್ ರಿಲೀಸ್ ಆಗಿತ್ತು. ಬಳಿಕ ತೆಲುಗಿನಲ್ಲಿ ಹೊಸ ವರ್ಷದ ಪ್ರಯುಕ್ತ ರಿಲೀಸ್ ಆಗಿ 2 ಭಾಷಾಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಕನ್ನಡ , ತೆಲುಗು ಟೀಸರ್ ಗೆ ಧ್ವನಿಯಾಗಿದ್ದ ಮುರುಳಿ ವಾಯ್ಸ್ ಗೆ ನೆಟ್ಟಿಗರು ಫಿದಾ ಆಗಿದ್ರು. ಇದೀಗ ತಮಿಳಿನ ಟೀಸರ್ ಗೂ ಅವ್ರೇ ಡಬ್ ಮಾಡಲಿರೋದು ವಿಶೇಷದ್ದು, ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ.
ಅಗೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಮುರುಳಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಹೆಬ್ಬುಲಿ, ರಾಬರ್ಟ್ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮದಗಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಮೊದಲ ಬಾರಿಗೆ ಆಶಿಕಾ ರಂಗನಾಥ್ ನಟಿಸಿದ್ದಾರೆ. ‘ಮದಗಜ’ ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಹಾಡುಗಳಿಗೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel