88 ಮಿಲಿಯನ್ ವರ್ಷಗಳ ಹಿಂದೆ ಭಾರತದ್ದೇ ಭಾಗವಾಗಿದ್ದ ದೇಶ ಮಡಗಾಸ್ಕರ್…. ಇಲ್ಲಿ ಡಿವೋರ್ಸ್ ಕಾನ್ಸೆಪ್ಟೇ ಇಲ್ಲ..!
ವಿಶ್ವದಲ್ಲೇ 4ನೇ ಬಹುದೊಡ್ಡ ದ್ವೀಪರಾಷ್ಟ್ರ… ಇಲ್ಲಿನ ಮಹಿಳೆಯರು ಪುರುಷರು ಬಹುತೇಕ ಒಂದೇ ರೀತಿಯಾದ ಬಟ್ಟೆಗಳನ್ನ ಧರಿಸುತ್ತಾರೆ.. ವಿಶ್ವದ ಅತ್ಯಂತ ಸುಂದರ ದೇಶ ಅಥವ ದ್ವೀಪಗಳಲ್ಲಿ ಒಂದು ಅಂತ ಪರಿಗಣಿಸಲಾಗುತ್ತೆ. ಆಫ್ರಿಕಾ ಖಂಡದ ಈ ದೇಶದ ಬಗ್ಗೆ ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ.. ಈ ದೇಶ ಮತ್ಯಾವುದೂ ಅಲ್ಲ “ಮಡಾಸ್ಕರ್”… ಹೌದು ಆಫ್ರಿಕಾದ ಸುಂದರ ದೇಶ ಮಡಗಾಸ್ಕರ್ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
ಈ ದೇಶದ ಅಧಿಕೃತ ಹೆಸರು – ಮಡಗಾಸ್ಕರ್
ಒಟ್ಟಾರೆ ಜನಸಂಖ್ಯೆ ಸುಮಾರು – 2 ಕೋಟಿ , 78 ಲಕ್ಷ
39 % ಜನ ನಗರಗಳಲ್ಲಿ ಇದ್ರೆ , 61 % ರಷ್ಟು ಜನ ಗ್ರಾಮಗಳಲ್ಲಿ ವಾಸವಾಗಿದ್ದಾರೆ.
ಮಡಗಾಸ್ಕರ್ ವಿಶ್ವದ 4ನೇ ಬಹುದೊಡ್ಡ ದ್ವೀಪ..
ದೊಡ್ಡ ದೊಡ್ಡ ಕಾಡುಗಳು , ಜ್ವಾಲಾಮುಖಿ ಇಂದ ಹಿಡಿದು , ಕೃಷಿ ಭೂಮಿ ವರೆಗೂ ಎಲ್ಲವೂ ಈ ದೇಶದಲ್ಲಿ ಕಾಣಬಹುದು.
ಈ ದೇಶದ ರಾಜಧಾನಿ – ಅಂಟಾನಾನಾರಿವೊ
ಈ ದೇಶದಿಂದ ವಿಶ್ವದ ಅನೇಕ ದೇಶಗಳಿಗೆ ಹೇರಳವಾಗಿ ಸೀ ಫುಡ್ ರವಾನೆ ಮಾಡಲಾಗ್ತದೆ. ಅದ್ರಲ್ಲೂ ಮೀನು ಮತ್ತೆ ಏಡಿಗಳನ್ನ ಹೆಚ್ಚಾಗಿ , ಜಾಪಾನ್ ಹಾಗೂ ಚೀನಾ ದೇಶಗಳಿಗೆ ರಫ್ತು ಮಾಡಲಾಗುತ್ತೆ. ಇದು ಈ ದೇಶದ ಆರ್ಥಿಕತೆಯ ಬಹುದೊಡ್ಡ ಮೂಲವು ಹೌದು..
ಮಡಗಾಸ್ಕರ್ ಐಲ್ಯಾಂಡ್ ಅನ್ನ ವಿಶ್ವಾದ್ಯಂತ ರೆಡ್ ಐಲ್ಯಾಂಡ್ ಅಂತಲೂ ಕೂಡ ಕರೆಯಲಾಗುತ್ತದೆ. ಈ ದ್ವೀಪದ ಮಣ್ಣು ಕೆಂಪು ಬಣ್ಣದಾಗಿದೆ.
ಇಲ್ಲಿನ ಜನರ ನಡುವೆ ಕೃಷಿ ಮಾಡುವುದು ಬಹು ಜನಪ್ರಿಯ.. ಹೆಚ್ಚಿನ ಜನರು ಕೃಷಿಯನ್ನೇ ಆಧರಿಸಿದ್ದಾರೆ.
ಮಡಗಾಸ್ಕರ್ ನಲ್ಲಿ ವಿಧ ವಿಧ ರೀತಿಯ ಧಾನ್ಯಗಳನ್ನ ಬೆಳೆಯಲಾಗುತ್ತೆ. ಬೇರೆ ಬೇರೆ ದೇಶಗಳಲ್ಲಿ ರಫ್ತು ಮಾಡಲಾಗುತ್ತೆ.
ಅಷ್ಟೇ ಅಲ್ಲ ಈ ದೇಶದಿಂದ ಅನೇಕ ಬಗೆಯ ಅಕ್ಕಿಯನ್ನ ಕೂಡ ರಫ್ತು ಮಾಡಲಾಗುತ್ತದೆ.
ಅಲ್ಲದೇ ಹೂವುಗಳ ಮತ್ತು ಹೂವುಗಳಿಂದ ತಯಾರಿಸಲಾದ ವಿವಿಧ ಬಗೆಯ ಎಣ್ಣೆಯನ್ನೂ ಕೂಡ ರಫ್ತು ಮಾಡಲಾಗ್ತದೆ.
ಈ ದೇಶ ಇಡೀ ವಿಶ್ವದಲ್ಲಿ ಅತಿ ಹೆಚ್ಚು ವೆನಿಲಾ ಸರಬರಾಜು ಮಾಡುವ ದೇಶವೂ ಆಗಿದೆ. ವಿಶ್ವದಲ್ಲೇ ಬಳಸಲಾಗುವ 60 % ವೆನಿಲಾ ಇದೇ ದೇಶದಿಂದಲೇ ರಫ್ತಾಗುತ್ತೆ.
ಅಷ್ಟೇಏ ಅಲ್ಲ ಈ ದೇಶದಿಂದ ಅತಿ ಹೆಚ್ಚಾಗಿ ಕಾಫಿ , ಸಕ್ಕರೆ ಇನ್ನೂ ಸಾಕಷ್ಟು ವಸ್ತುಗಳನ್ನ ರಫ್ತು ಮಾಡಲಾಗುತ್ತೆ. ಆದದ್ರೂ ಕೂಡ ಈ ದೇಶ ಬಡ ದೇಶಗಳ ಲಿಸ್ಟ್ ಗೆ ಸೇರುತ್ತೆ. ಈ ದೇಶದಲ್ಲಿ ಇಂದಿಗೂ ಯಾವುದೇ ಉದ್ಯೋಗವಿಲ್ಲದ ಸಾಕಷ್ಟು ಜನರಿದ್ದಾರೆ. ಈ ದೇಶದಲ್ಲಿ ಸಿಗುವ ಸಾಕಷ್ಟು ವಸ್ತುಗಳು ಇಡೀ ವಿಶ್ವದಲ್ಲೇ ಎಲ್ಲೂ ಸಿಗೋದಿಲ್ಲ.. ಇಲ್ಲಿ ಸಿಗುವ ಲ್ಯಾಮ್ ಸ್ಟೋನ್ ( ಕಲ್ಲು ) ವಿಶ್ವದಲ್ಲಿ ಎಲ್ಲೂ ಸಿಗೋದಿಲ್ಲ ಅಂತ ಹೇಳಲಾಗುತ್ತೆ. ಆ ಕಲ್ಲನ್ನ ಅನೇಕರು ಕಾನುನು ಬಾಹಿರವಾಗಿ ರಫ್ತು ಮಾಡ್ತಾರೆ.
ಈ ದೇಶದಲ್ಲಿ ಮಾಂಸಾಹಾರಿ ಆಹಾರಗಳನ್ನ ಹೆಚ್ಚಾಗಿ ಸೇವಿಸಲಾಗುತ್ತದೆ.. ಅದ್ರಲ್ಲೂ ನಾನ್ ವೆಜ್ ಪ್ರಿಯರಿಗೆ ಈ ದೇಶದಲ್ಲಿ ತರಹೇವಾರಿ ಡಿಶ್ ಗಳು ಸಿಗುತ್ತವೆ. ಇನ್ನೂ ಇಲ್ಲಿ ತೆಂಗಿನ ಕಾಯಿ ಅಥವ ಎಳನೀರು ಸಿಕ್ಕಾಪಟ್ಟೆ ಫೇಮಸ್.. ಇಲ್ಲಿನ ಬಹುತೇಕ ಪ್ರತಿ ಡಿಶ್ ಗಳಲ್ಲು ತೆಂಗಿನಕಾಯಿ ಸ್ವಾದ ಸಿಕ್ಕಿಬಿಡುತ್ತದೆ. ತೆಂಗಿನ ಕಾಯಿಯಿಂದಲೇ ಮಾಡಿದ ಸಾಕಷ್ಟು ಡಿಶ್ ಗಳು ಸಿಗುತ್ತವೆ. ಇಲ್ಲಿ ರೈಸ್ ಬಾಲ್ ಸಖತ್ ಫೇಮಸ್ ಡಿಶ್. ಇದನ್ನ ಚಿಕನ್ ಜೊತೆಗೆ ರೋಲ್ ಮಾಡಿ ತಯಾರಿಸಲಾಗ್ತದೆ.
ನನಮ್ಮ ಭಾರತ ಹಾಗೂ ಮಡಗಾಸ್ಕರ್ ನ ನಡುವೆ ಆಳವಾದ ಸಂಬಂಧವಿದೆ.. ಈ ವಿಚಾರ ಅನೇಕರಿಗೆ ಗೊತ್ತಿಲ್ಲ ಅಷ್ಟೇ.. ಹೌದು ಮಡಗಾಸ್ಕರ್ ಸುಮಾರು 88 ವರ್ಷಗಳ ಹಿಂದೆ ನಮ್ಮದೇ ದೇಶ ( ಭಾರತದ ) ಭಾಗವಾಗಿತ್ತು… ಮಡಗಾಸ್ಕರ್ ನಲ್ಲಿ ಮಹಿಳೆಯರು ಪುರುಷರು , ಮಕ್ಕಳು ಹಿರಿಯರು ಯುವಕರು ವಯಸ್ಕರು ಎಲ್ಲರೂ ಕೂಡ ಒಂದೇ ರೀತಿಯಾದ ಬಟ್ಟೆಗಳನ್ನ ಧರಿಸುತ್ತಾರೆ. ಈ ವಿಚಾರದಲ್ಲಿ ಇಡೀ ವಿಶ್ವದಲ್ಲೇ ಮಡಗಾಸ್ಕರ್ ಏಕಮಾತ್ರ ದೇಶವಾಗಿದೆ. 
ಇಲ್ಲಿನ ಸಾಂಪ್ರದಾಯಿಕ ಬಟ್ಟೆಯನ್ನ ಸ್ಥಳೀಯ ಭಾಷೆಯಲ್ಲಿ ಲಾಂಬಾ ಎನ್ನಲಾಗುತ್ತದೆ. ಈ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಡಿದೆ. ಇಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಮಂಗಗಳಿವೆ. ಇಲ್ಲಿ 100 ಕ್ಕೂ ಹೆಚ್ಚಿನ ಪ್ರಜಾತಿಯ ಮಂಗಗಳಿವೆ.
ಈ ದೇಶವನ್ನ ಲೀಮರ್ ದೇಶ ಅಂತಲೂ ಕರೆಯಲಾಗುತ್ತೆ. ಈ ದೇಶದಲ್ಲಿ ಇಂದೂ ಕೂಡ 50 ರಿಂದ 100 ಕ್ಕೂ ಹೆಚ್ಚು ವಿವಿಧ ರೀತಿಯ ಲೀಮರ್ ಗಳು ಕಾನಸಿಗುತ್ವೆ. ಅಂದ್ಹಾಗೆ ಮಡಗಗಾಸ್ಕರ್ ಹಾವುಗಳು ಕೂಡ ವಿಶ್ವದಲ್ಲೇ ಪ್ರಸಿದದ್ಧತೆ ಗಳಿಸಿದೆ. ಇಲ್ಲಿ ಸಿಗುವ 80 % ರಷ್ಉ ಹಾವುಗಳು ಸಿಕ್ಕಾಪಟ್ಟೆ ವಿಷಪೂರಿತವಾಗಿರುತ್ತವೆ.
ಈ ದೇಶದಲಲ್ಲಿ ಡಿವೋರ್ಸ್ ಕಾನ್ಸೆಪ್ಟೇ ಇಲ್ಲ.. ಹೌದು ಇಲ್ಲಿ ಒಮ್ಮೆ ಮದುವೆಯಾದ್ರೆ ಮುಗೀತು.. ವಿಚ್ಛೇಧನ ಪಡೆಯೋ ಹಾಗಿಲ್ಲ. ಈ ದೇಶದಲಲ್ಲಿ ಸಿಕ್ಕಾಪಟ್ಟೆ ಬಡತನ ಿದೆ. ಹೀಗಾಗಿ ಈ ದೇಶದಲ್ಲಿ ವಿದ್ಯಾಭ್ಯಾಸ ಪ್ರಮಾಣವು ತೀರ ಕಡಿಮೆಯಿದೆ. ಅಲ್ಲದೇ ಈ ದೇಶದಲ್ಲಿ ಮೂಡನಂಬಿಕೆ ಸಿಕ್ಕಾಪಟ್ಟೆ ಇದೆ. ಇಲ್ಲಿ ದೆವ್ವ ಪಿಶಾಚಿಗಳಂತಹ ವಿಚಾರಗಳನ್ನ ಜನ ಹೆಚ್ಚಾಗಿ ನಂಬ್ತಾರೆ. ಇನ್ನೂ ಇಲ್ಲಿ ವಿಚಿತ್ರ ರೀತಿ ರಿವಾಜುಗಳನ್ನೂ ಆಚರಿಸಲಾಗುತ್ತೆ. ಮಾಠ ಮಂತ್ರ ( BLACK MAGIC) ಹೆಚ್ಚಾಗಿ ನಡೆಸಲಾಗ್ತದೆ. ಇಲ್ಲಿನ ಹೆಚ್ಚಿನ ಸಂಖ್ಯೆಯ ಜನರು HIV ಯಿಂದ ಬಳಲುತ್ತಿದ್ದಾರೆ. ಈ ದೇಶದಲ್ಲಿ ವೈದ್ಯಕೀಯ ಸೌಲಭ್ಯವೂ ದುರ್ಬಲವಾಗಿದೆ.
ಇಲ್ಲಿ ಸೊಳ್ಳೆಗಳ ಕಾಟವೇ ಹೆಚ್ಚಿದೆ.. ಎಷ್ಟರ ಮಟ್ಟಿಗೆ ಅಂದ್ರೆ ಇಲ್ಲಿ ಪ್ರತಿ ವರ್ಷ 1000 ಕ್ಕೂ ಅಧಿಕ ಜನ ಸೊಳ್ಲೆ ಕಡಿತದಿಂದಲೇ ಸಾವನಪ್ಪುತ್ತಾರೆ. ಇಲ್ಲಿನ ಸೊಳ್ಲೆಗಳು ಅತಿ ಹೆಚ್ಚು ಅಪಾಯಕಾರಿ..
ಮಡಗಾಸ್ಕರ್ ನಲ್ಲಿ ಪ್ರವಾಸಕ್ಕೆ ಹೋಗ ಬಯಸಿದ್ರೆ – ಸರಿಯಾದ ದಾಖಲಾತಿಗಳನ್ನ ೊದಗಿಸಿದ್್ರೆ 4- 5 ದಿನಗಳಲ್ಲಿ ವೀಸಾ ಸಿಗುತ್ತೆ.. 5-6 ದಿನಗಳ ಕಾಲ ಇಲ್ಲಿ ಪ್ರವಾಸ ಮಾಡಬೇಕೆಂದ್ರೆ ಒಬ್ಬರಿಗೆ ಸುಮಾರು 50-60 ಸಾವಿರ ಬೇಕಾಗುತ್ತದೆ.
ಇಲ್ಲಿನ ಕರೆನ್ಸಿ – ಮಾಲಗಾಸಿ ಅರಿಯಾರಿ – 1 ಮಾಲಗಾಸಿ ಅರಿಯಾರಿ ಮೌಲ್ಯ ಸುಮಾರು 0.019 ಭಾರತೀಯ ರೂಪಾಯಿಗೆ ಸಮ.








