ಲೋಕಸಭಾ ಚುನಾವಣೆ ಪರಾಭವಗೊಂಡ ಬಳಿಕ ರಾಜ್ಯ ರಾಜಕೀಯದಿಂದ ಕಣ್ಮರೆಯಾಗಿದ್ದ ಜೆಡಿಎಸ್ ಯುವ ನಾಯಕ ಮಧುಬಂಗಾರಪ್ಪ ತಮ್ಮ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ಮಾತು ಎಲ್ಲೆಡೆ ಹರಿದಾಡುತ್ತಿದೆ.. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಜೆಡಿಎಸ್ ನಲ್ಲಿ ಯಾವುದೂ ಸರಿಯಿಲ್ಲ ಎಂದು ತಮ್ಮದೇ ಪಕ್ಷದ ವಿರುದ್ಧ ಗುಡುಗೊ ಮೂಲಕ ಜೆಡಿಎಸ್ ತೊರೆಯುವ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಧುಬಂಗಾರಪ್ಪ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದೆಂದು ನಾನು ತೀರ್ಮಾನ ಮಾಡಿದ್ದೆ. ಆದರೆ ದೇವೇಗೌಡರ ಒತ್ತಾಯಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯ್ತು ಅಂತ ಹೇಳಿದರು.
ಇನ್ನು, ಪಕ್ಷದ ಕೆಲವು ಇತ್ತೀಚಿನ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬಾ ನೋವಾಗಿದೆ. ನನಗೆ ಮಾತ್ರವಲ್ಲದೆ ಪಕ್ಷದ ಕಾರ್ಯಕರ್ತರಿಗೂ ನೋವಾಗಿದೆ. ಇದರಿಂದಾಗಿ ಪಕ್ಷದ ಮೇಲೆ ನಂಬಿಕೆಯೇ ಹೋಗಿದೆ ಅಂಥ ಕಿಡಿಕಾರಿದರು. ಈ ಮೂಲಕ ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ, ಯಾವಾಗ ಬೇಕಾದ್ರು ಪಕ್ಷದಿಂದ ನಾನು ಕಾಲಿಡಬಹುದು ಎನ್ನುವ ಸ್ಪಷ್ಟ ಸಂದೇಶವನ್ನು ಪಕ್ಷದ ಹಿರಿಯ ನಾಯಕರಿಗೆ ನೀಡಿದ್ದಾರೆ.








