ಜಮೀರ್ ಬ್ಯುಸಿನೆಸ್ ಕ್ಲಾಸ್ ಜನ : ಇಡಿ ದಾಳಿ ಬಗ್ಗೆ ಮಾಧುಸ್ವಾಮಿ ಪ್ರತಿಕ್ರಿಯೆ
ಮೈಸೂರು: ಶಾಸಕ ಜಮೀರ್ ಗೆ ಬೇಕಾದಷ್ಟು ವ್ಯವಹಾರ ಇದೆ. ಅವರು ಬ್ಯುಸಿನೆಸ್ ಕ್ಲಾಸ್ ಜನ. ಹೀಗಾಗಿ ವ್ಯವಹಾರದ ವ್ಯತ್ಯಾಸಗಳ ಬಗ್ಗೆ ಅನುಮಾನ ಬಂದು ಇಂತಹ ದಾಳಿ ನಡೆದಿರುತ್ತದೆ ಎಂದು ಜಮೀರ್ ಮನೆ ಮೇಲೆ ಇಡಿ ದಾಳಿ ಬಗ್ಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಮೀರ್ ನಿವಾಸದ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಈ ಐಟಿ, ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಕಾಂಗ್ರೆಸ್ ಅಂತಾ ಹೇಳೋದು ಸರಿಯಲ್ಲ. ಸಿದ್ದರಾಮಯ್ಯ ನಂತವರು ಈ ರೀತಿ ಹೇಳುವುದು ತಪ್ಪು ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದರು.
ಇನ್ನು ಕಾಂಗ್ರೆಸ್ ನವರು ಅವರ ಆಡಳಿತ ಕಾಲದಲ್ಲಿ ಐಟಿ- ಇಡಿ ಗಳನ್ನು ದುರುಪಯೋಗ ಪಡಿಸಿ ಕೊಂಡಿರಬಹುದು.
ಇವತ್ತು ಅದೇ ಆಗುತ್ತಿದೆ ಎಂದು ಅವರು ಅಂದು ಕೊಂಡಿದ್ದಾರೆ ಎಂದು ಹೇಳಿದ ಮಾಧುಸ್ವಾಮಿ, ವ್ಯವಹಾರದ ಲೆಕ್ಕ ಪತ್ರಗಳಲ್ಲಿ ಅನುಮಾನ ಬಂದಾಗ ಈ ರೀತಿ ದಾಳಿ ಸಹಜ. ದಾಳಿಯೆ ತಪ್ಪು ಎಂದರೇ ಹೇಗೇ ಹೇಳಿ ಎಂದು ಪ್ರಶ್ನಿಸಿದರು.