madhya pradesh : ಬಸ್ – ಕಾರ್ ಡಿಕ್ಕಿ 11 ಮಂದಿ ಸ್ಥಳದಲ್ಲೇ ಸಾವು….
ಬಸ್ ಮತ್ತು ಟವೇರಾ ಕಾರು ಪರಸ್ಪರ ಡಿಕ್ಕಿ ಹೊಡೆದು ಸುಮಾರು 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾತ್ರಿ 2 ಗಂಟೆ ಸುಮಾರಿಗೆ ಮಧ್ಯಪ್ರದೇಶದ ಬೇತುಲ್-ಅಮರಾವತಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಕಾರಿನಲ್ಲಿದ್ದ 11 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 6 ಪುರುಷರು, 3 ಮಹಿಳೆಯರು ಮತ್ತು 2 ಮಕ್ಕಳು ಸೇರಿದ್ದಾರೆ. ಮೃತದೇಹಗಳನ್ನು ಜಲ್ಲಾರ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಬೇತುಲ್ ಕಡೆಯಿಂದ ಬರುತ್ತಿದ್ದ ಬಸ್ ಮತ್ತು ಪರತ್ವಾರ ಕಡೆಯಿಂದ ಬರುತ್ತಿದ್ದ ಕಾರು ಎರಡೂ ಮುಖಾ ಮುಖಿ ಡಿಕ್ಕಿ ಹೊಡೆದುಕೊಂಡಿವೆ. ಕಾರಿನಲ್ಲಿದ್ದ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜನರ ಸಹಾಯದಿಂದ ಪೊಲೀಸರು 11 ಮೃತದೇಹಗಳ ಪೈಕಿ 7 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಉಳಿದ 4 ಶವಗಳನ್ನು ಕಾರನ್ನು ಕಟ್ ಮಾಡಿ ಹೊರ ತೆಗೆಯಲಾಗಿದೆ.
Madhya Pradesh: 11 killed in bus-car collision
ಇದನ್ನೂ ಓದಿ – https://saakshatv.com/miss-puerto-rico…-ಅರ್ಜೆಂಟೀನಾ-ಮತ್ತ/








