16 ವರ್ಷದ ಬಾಲಕನಿಂದ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ; ಕೊಲೆ…
16 ವರ್ಷದ ಬಾಲಕ 58 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯ ಬಾಯಿಯನ್ನ ಬಿಗಿದು ಬರ್ಬರವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದೆ ಈ ಬಾಲಕ ಮೊಬೈಲ್ ಕಂದಿದ್ದವಾನೆ ಎಂದು ಮಹಿಳೆಯ ಮನೆಯವರು ಆರೋಪಿಸಿದ್ದರು. ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲಾಸಪುರಿ ಗ್ರಾಮದಲ್ಲಿ ಜನವರಿ 30 ರಂದು ರಾತ್ರಿ ಈ ಘಟನೆ ನಡೆದಿದೆ. ಆರೋಪಿ ಬಾಲಕ ಮಹಿಳೆಯ ಬಾಯಿಗೆ ಪ್ಲಾಸ್ಟಿಕ್ ಚೀಲ ಮತ್ತು ಬಟ್ಟೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಎಳೆದೋಯ್ದು ಕುಡುಗೋಲಿನಿಂದ ತಲೆ ದೇಹ ಮತ್ತು ಖಾಸಗಿ ಅಂಗಗಳಿಗೆ ಹಲ್ಲೆ ಗಾಯಗೊಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ TV ವೀಕ್ಷಿಸಲು ಕೊಲೆಯಾದ ಮಹಿಳೆಯ ಮನೆಗೆ ಬರುತ್ತಿದ್ದ ಬಾಲಕನ ಮೇಲೆ ಕುಟುಂಬದ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಾಲಕನ ಮೇಲೆ ಮೊಬೈಲ್ ಕಳ್ಳತನ ಆರೋಪಿಸಿದ ನಂತರ ಆ ಹುಡುಗ ಮತ್ತು ಕುಟುಂಬದ ನಡುವೆ ದ್ವೇಷಕ್ಕೆ ಕಾರಣವಾಗಿದೆ.
ಮಹಿಳೆಯನ್ನ ಕೊಂದು ಅತ್ಯಾಚಾರ ನಡೆಸಿದ ಬಳಿಕ ಮನೆಯಲ್ಲಿಟ್ಟಿದ್ದ 1000 ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಬಾಲಕ ಪರಾರಿಯಾಗಿದ್ದಾನೆ. ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಬಾಲಕ ಅಪರಾಧವನ್ನ ಒಪ್ಪಿಕೊಂಡಿದ್ದಾನೆ” ಎಂದು ಅಧಿಕಾರಿ ಹೇಳಿದರು.
Madhya Pradesh : 58-year-old woman raped by 16-year-old boy; murder…