ತಳ್ಳುಗಾಡಿಯಯಲ್ಲಿ ತಂದೆಯನ್ನ ಆಸ್ಪತ್ರೆಗೆ ಸೇರಿಸಿದ 6 ವರ್ಷದ ಪುತ್ರ…
ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲು ಆರು ವರ್ಷದ ಬಾಲಕನೊಬ್ಬ ತಳ್ಳುವ ಗಾಡಿಯಿಂದ ತಳ್ಳಿಕೊಂಡು ಹೋಗುತ್ತಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಶನಿವಾರದಂದು ಸ್ಥಳೀಯರು ಬಾಲಕ ತನ್ನ ತಾಯಿಯೊಂದಿಗೆ ಮರದ ಗಾಡಿಯನ್ನು ತಳ್ಳುತ್ತಿರುವ ಪೋಟೋವನ್ನ ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.
ಸಿಂಗ್ರೌಲಿ ಜಿಲ್ಲೆಯ ಬಲಿಯಾರಿ ಪಟ್ಟಣದಲ್ಲಿ ಘಟನೆ ವರದಿಯಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಆಂಬುಲೆನ್ಸ್ ಗಾಗಿ ಕಾದು ಅದರ ಸುಳಿವಿಲ್ಲದೆ ಕಾರಣ ತಳ್ಳುವ ಗಾಡಿಯಲ್ಲಿ ಮಲಗಿಸಿಕೊಂಡು ಆಸ್ಪತ್ರಗೆ ಕರೆದೊಯ್ಯಲಾಗಿದೆ.
ಟೀ-ಶರ್ಟ್ ಮತ್ತು ನೀಲಿ ಡೆನಿಮ್‌ಗಳನ್ನು ಧರಿಸಿರುವ ಹುಡುಗ ಮೂರು ಕಿಲೋಮೀಟರ್‌ಗಳಷ್ಟು ದೂರ ತಳ್ಳಿದ ಗಾಡಿಯನ್ನ ಹಾಂಡಲ್ ಮಾಡುತ್ತಿರುವುದನ್ನ ವಿಡಿಯೋದಲ್ಲಿ ನೋಡಬಹುದು. ಆತನ ತಾಯಿ ಮತ್ತೊಂದು ತುದಿಯಿಂದ ಗಾಡಿ ತಳ್ಳಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ನಂತರದಿಂದ ಸಿಂಗ್ರೌಲಿ ಜಿಲ್ಲಾಡಳಿತವ ವಿಷಯವನ್ನು ಅರಿತುಕೊಂಡು ಶನಿವಾರ ಸಂಜೆ ನಂತರ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದೆ.
Madhya Pradesh : 6-Yr-Old Boy Takes Ailing Father To Hospital In Wooden Cart…