Madhya Pradesh-ವ್ಯಕ್ತಿಯೊಬ್ಬತನ್ನ ಪ್ರೇಯಸಿಯ ಕತ್ತುಸೀಳಿ ಬರ್ಬರವಾಗಿ ಹತ್ಯೆ ಮಾಡಿದ ದಾರುಣ ಘಟನೆ ಬೆಳಕಿಗೆ ಬಂದಿದೆ .
ಕೊಲೆಮಾಡಿದ್ದಲ್ಲದ್ದೆ ಆಕೆಯ ಶವದೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿ ಬಿಟ್ಟಿದಾನೆ ಈ ಭೀಕರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕೋಲೆಯಾದ ಮಹಿಳೆ ಶಿಲ್ಪಾ ಝರಿಯಾ 25 ಎಂದು ಗುರುತಿಸಲಾಗಿದೆ . ಜಬಲ್‍ಪುರದ ಮೇಖ್ಲಾ ರೆಸಾರ್ಟ್‍ನಲ್ಲಿರುವ ರೂಂ ಒಂದರಲ್ಲಿ ಶಿಲ್ಪಾಳನ್ನು ಕರೆಸಿಕೊಂಡ ಅಭಿಜಿತ್ ನಂತರ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಅಭಿಜಿತ್ ಆಕೆಯ ಶವದೊಂದಿಗಿನ ಸರಣಿ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ .
ಈ ವೀಡಿಯೋದಲ್ಲಿ ರಕ್ತ ಸಿಕ್ತವಾಗಿ ಮಂಚದ ಮೇಲೆ ಮಲಗಿದ ಶಿಲ್ಪಾ ನನ್ನು ತೋರಿಸಿ ನಂತರ ಮಾತನಾಡಿರುವ ಅಭಿಜಿತ್ ಯಾರಿಗೂ ನಂಬಿಕೆ ದ್ರೋಹ ಮಾಡಬೇಡಿ ಎಂದು ಹೇಳೆದ್ದಾನೆ .
ಅಭಿಜಿತ್ ಪಾಟ್ನಾದ ವ್ಯಾಪಾರಿಯಾಗಿದ್ದು ಜಿತೇಂದ್ರ ಎಂಬಾತ ತನ್ನ ಪಾಟ್ನರ್ ಆಗಿದ್ದ. ಆದರೆ ಶಿಲ್ಪಾ ಇಬ್ಬರೊಂದಿಗೆ ಸಂಬಂಧವನ್ನು ಹೊಂದಿದ್ದಳು ಎಂದು ಆರೋಪಿಸುತ್ತಾನೆ.
ಶಿಲ್ಪಾ ಜಿತೇಂದ್ರನ ಬಳಿ ಸುಮಾರು 12 ಲಕ್ಷ ರೂ. ಸಾಲ ಪಡೆದು ಜಬಲ್‍ಪುರಕ್ಕೆ ಪರಾರಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಜೀತೇಂದ್ರ ನನಗೆ ಎಲ್ಲ ವಿಷಯವನ್ನು ತಿಳಿಸಿದ್ದು, ಜೀತೇಂದ್ರನ ಸೂಚನೆ ಮೇರೆಗೆ ಶಿಲ್ಪಾಳನ್ನು ಕೊಲೆ ಮಾಡಿದ್ದೇನೆ. ನಾವು ಮತ್ತೆ ಸ್ವರ್ಗದಲ್ಲಿ ಭೇಟಿಯಾಗುತ್ತೇವೆ ಎಂದು ತಿಳಿಸಿದ್ದಾನೆ.
ಘಟನೆಗೆ ಸಂಬಂಧಿಸಿ ಜಬಲ್‍ಪುರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಲ್ಪಾಳ ಮೃತದೇಹವನ್ನು ಮೇಖ್ಲಾ ರೆಸಾರ್ಟ್‍ನಲ್ಲಿರುವ ಕೊಠಡಿಯಿಂದ ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಅಭಿಜಿತ್ ಹೆಸರಿಸಿದ್ದ ಜಿತೇಂದ್ರ ಹಾಗೂ ಸುಮಿತ್ ಪಟೇಲ್‍ನನ್ನು ಬಿಹಾರದಿಂದ ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಕೊಲೆ ಮಾಡಿದ ಅಭಿಜಿತ್‍ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.








