ಟ್ರಕ್ ನಿಂದ 12 ಕೋಟಿ ಮೌಲ್ಯದ ಮೊಬೈಲ್ ಗಳು ಕಳ್ಳತನ – 24 ಗಂಟೆಯಲ್ಲೇ ಸೆರ..
ಹರ್ಯಾಣಕ್ಕ ಪ್ರಯಾಣಿಸುತ್ತಿದ್ದ ಕಂಟೈನರ್ ಟ್ರಕ್‌ನಿಂದ ರೂ.12 ಕೋಟಿ ಮೌಲ್ಯದ ಮೊಬೈಲ್ ಫೋನ್ ಹ್ಯಾಂಡ್‌ಸೆಟ್‌ಗಳನ್ನು ನಾಲ್ವರು ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಆದರೂ ಕಳ್ಳತನವಾದ 24 ಗಂಟೆಗಳಲ್ಲಿ ಪೊಲೀಸರು ಇಂದೋರ್ ಬಳಿ ಮತ್ತೊಂದು ಟ್ರಕ್‌ನಿಂದ ಮೊಬೈಲ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಕಳ್ಳರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸಾಗರ್ ಜಿಲ್ಲೆಯ ಎಸ್ಪಿ ತರುಣ್ ನಾಯಕ್ ಹೇಳಿಕೆಯ ಪ್ರಕಾರ ಗುರುವಾರ ರಾತ್ರಿ ಮಹಾರಾಜಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ರಲ್ಲಿ ಕಳ್ಳರು ಟ್ರಕ್ ಅನ್ನು ಅಡ್ಡಗಟ್ಟಿದ್ದಾರೆ. 12 ಕೋಟಿ ಮೌಲ್ಯದ ಮೊಬೈಲ್‌ಗಳೊಂದಿಗೆ ಟ್ರಕ್ ತಮಿಳುನಾಡಿನಿಂದ ಗುರ್‌ಗಾಂವ್‌ಗೆ ತೆರಳುತ್ತಿತ್ತು. ಮಧ್ಯಪ್ರದೇಶದ ಬಳಿ ದುಷ್ಕರ್ಮಿಗಳು ಚಾಲಕನನ್ನು ಅಪಹರಿಸಿ, ಮೊಬೈಲ್ ಫೋನ್‌ಗಳನ್ನು ಕದ್ದು ನರಸಿಂಗಪುರದಲ್ಲಿ ಬಿಟ್ಟು ಹೋಗಿದ್ದಾರೆ.
ಕಳ್ಳತನ ಮಾಡಿದ ಫೋನ್‌ಗಳನ್ನು ಮತ್ತೊಂದು ಟ್ರಕ್‌ನಲ್ಲಿ ತುಂಬಿಕೊಂಡಿ ದಾಳಿಕೋರರು ಪರಾರಿಯಾಗುತ್ತಿದ್ದಾಗ, ಸಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಟ್ರಕ್ ಅನ್ನು ತಡೆಹಿಡಿದಾಗ ಕಳ್ಳರು ಲಾರಿ ಬಿಟ್ಟು ಓಡಿ ಹೋಗಿದ್ದಾರೆ. ವಾಹನವನ್ನು ವಶಪಡಿಸಿಕೊಂಡು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ನಾಯ್ಕ್ ತಿಳಿಸಿದ್ದಾರೆ.








