ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಆಪರೇಷನ್ ಕಮಲ ದೇಶ ಮತ್ತು ಕರ್ನಾಟಕÀ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿ ಮಾಡಿದೆ. ಈ ಹಿಂದೆ ಕರ್ನಾಟಕ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಲಾಗಿತ್ತು. ಇದೀಗ ಇದೆ ಮಾದರಿಯಲ್ಲಿ ಮಧ್ಯಪ್ರದೇಶದ ಸರ್ಕಾರಕ್ಕೆ ಬಿಜೆಪಿ ಚೆಕ್ ಮೇಟ್ ಇಟ್ಟಿದೆ.
ಕರ್ನಾಟಕ ರಾಜ್ಯದಲ್ಲಿದ್ದ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಹರಸಾಹಸ ಪಟ್ಟು ಕೊನೆಗೆ ಯಶಸ್ವಿಯಾಗಿತ್ತು. ಅದಕ್ಕಾಗಿ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದರು. ಮುಂಬೈನ ರೆಸಾರ್ಟ್ನಲಿ ಉಳಿದಿದ್ದ ಎಚ್. ವಿಶ್ವನಾಥ್, ರಮೇಶ್ ಜಾರಕಿಹೊಳಿ ಸೇರಿದಂತೆ ೧೭ ಜನ ಶಾಸಕರು ಅಲ್ಲಿಂದಲೇ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆದರೆ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ ಶಾಸಕರನ್ನು ಅನರ್ಹಗೊಳಿಸಿದ್ದರು. ಇದೀಗ ಬಿಜೆಪಿ ಕರ್ನಾಟಕದಲ್ಲಿ ಮಾಡಿದ ಆಪರೇಷನ್ ಕಮಲದ ಮಾದರಿಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಪತನ ಮಾಡಲು ಮುಂದಾಗಿದೆ. ಆಪರೇಷನ್ ಕಮಲಕ್ಕೆ ಒಳಗಾಗಿರುವ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದ ರೆಬಲ್ ಶಾಸಕರು ಮುಂಬೈನಿAದ ರಾಜೀನಾಮೆ ರವಾನಿಸಿದಂತೆಯೇ, ಮಧ್ಯಪ್ರದೇಶ ೧೯ ಜನ ಕಾಂಗ್ರೆಸ್ ಶಾಸಕರು ಬೆಂಗಳೂರಿನಿ0ದಲೇ ಮಧ್ಯಪ್ರದೇಶದ ಸಭಾಧ್ಯಕ್ಷರಿಗೆ ರಾಜೀನಾಮೆ ರವಾನಿಸಿದ್ದಾರೆ.
ಒಂದೆಡೆ ರಾಹುಲ್ ಗಾಂಧಿ ಆಪ್ತ ಜ್ಯೋತಿರಾದಿತ್ಯ ಸಿಂಧ್ಯಾ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ೧೯ ಜನ ಶಾಸಕರು ಸ್ಪೀಕರ್‌ಗೆ ರಾಜೀನಾಮೆ ರವಾನಿಸಿದ್ದಾರೆ. ಇದರೊಟ್ಟಿಗೆ ಮಧ್ಯಪ್ರದೇಶದಲ್ಲೇ ಇರುವ ಹಿರಿಯ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.
ಸರ್ಕಾರ ಉಳಿಸಿಕೊಳ್ಳಲು ಕಮಲ್ ನಾಥ್ ಹರಸಾಹಸ

ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆಪರೇಷನ್ ಕಮಲ ಸದ್ದು ಮಾಡಿದ ಬೆನ್ನಲೇ ಕಮಲ್ ನಾಥ್ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದರು. ಸಭೆ ಬಳಿಕ ೨೦ ಜನ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ವೇಳೆ ಮಧ್ಯಪ್ರದೇಶ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟು, ಅಸಮಾಧಾನವನ್ನು ಸರಿಪಡಿಸುವಂತೆ ರಾಜೀನಾಮೆ ನೀಡಿದ ನಾಯಕರು ಕಮಲ್ ನಾಥ್ ಬಳಿ ಕೇಳಿಕೊಂಡಿದ್ದಾರೆ. ಹಾಗಾಗಿ, ಮಧ್ಯಪ್ರದೇಶ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆ ಇದ್ದು, ರೆಬೆಲ್ ಶಾಸಕರಿಗೆ ಮಂತ್ರಿಗಿರಿ ನೀಡಲು ಈ ತಂತ್ರವನ್ನು ಮಾಡಲಾಗಿದೆ. ಆದರೆ ರೆಬೆಲ್ ಶಾಸಕರು ಪಟ್ಟು ಸಡಿಲಿಸಿಲ್ಲ. ಇದರಿಂದಾಗಿ ಬಿಜೆಪಿ ಬಹುಮತ ಸಾಬೀತುಪಡಿಸಿ ಮತ್ತೆ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಹಾದಿ ಸುಲಭವಾಗಲಿದೆ. ಕಮಲನಾಥ್ ಸರ್ಕಾರವನ್ನ ಉರುಳಿಸಿ, ಕಳೆದ ಚುನಾವಣೆಗೂ ಮುನ್ನ ೧೫ ವರ್ಷಗಳ ಕಾಲ ತನ್ನ ವಶದಲ್ಲಿದ್ದ ಮಧ್ಯಪ್ರದೇಶದಲ್ಲಿ ಮತ್ತೆ ಕಮಲ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.,
ಪಕ್ಷಗಳ ಬಲಾಬಲ

ಮಧ್ಯಪ್ರದೇಶದಲ್ಲಿ ಒಟ್ಟು ೨೩೦ ವಿಧಾನಸಭಾ ಕ್ಷೇತ್ರಗಳಿವೆ. ೨೦೧೮ರಲ್ಲಿ ನಡೆದ ಚುನಾವಣೆ ಬಳಿಕ ಇಬ್ಬರು ಶಾಸಕರು ಸಾವನ್ನಪ್ಪಿದ್ದರು.. ಹಾಗಾಗಿ ಮಧ್ಯಪ್ರದೇಶ ವಿಧಾನಸಭೆಯ ಸಂಖ್ಯಾ ಬಲ ೨೨೮ ಆಗಿದೆ. ಇದರಲ್ಲಿ ಮ್ಯಾಜಿಕ್ ನಂಬರ್ ೧೧೫. ಈ ೨೨೮ ಶಾಸಕರಲ್ಲಿ, ಕಾಂಗ್ರೆಸ್- ೧೧೪, ಬಿಜೆಪಿ- ೧೦೯, ಬಿಎಸ್ಪಿ- ೨, ಸಮಾಜವಾದಿ ಪಕ್ಷ-೧ ಶಾಸಕರನ್ನ ಹೊಂದಿದ್ದು, ನಾಲ್ವರು ಪಕ್ಷೇತರ ಶಾಸಕರು ಇದ್ದಾರೆ. ಕಾಂಗ್ರೆಸ್ಗೆ ಸಂಪೂರ್ಣ ಬಹುಮತ ಬಾರದ ಕಾರಣ ಬಿಎಸ್ಪಿಯ ನಾಲ್ವರು ಹಾಗೂ ಎಸ್ಪಿಯ ಒಬ್ಬರು ಸೇರಿ ೧೧೯ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿತ್ತು.
ಇದೀಗ ೨೦ ಕಾಂಗ್ರೆಸ್ ಶಾಸಕರು ನೀಡಿರೋ ರಾಜೀನಾಮೆ ಅಂಗೀಕಾರವಾದರೆ, ವಿಧಾನಸಭೆಯ ಬಲ ೨೦೮ಕ್ಕೆ ಇಳಿಯಲಿದೆ. ಆಗ ಮ್ಯಾಜಿಕ್ ನಂಬರ್ ೧೦೫ ಆಗಲಿದೆ. ಹೀಗಾದ್ರೆ ಕಾಂಗ್ರೆಸ್ ಬಳಿ ೯೪ ಶಾಸಕರು ಮಾತ್ರ ಉಳಿಯಲಿದ್ದಾರೆ. ೧೦೯ ಶಾಸಕರಿರುವ ಬಿಜೆಪಿ ಸುಲಭವಾಗಿ ಬಹುಮತ ಸಾಬೀತುಪಡಿಸಬಹುದು.








