Madhya Pradesh : ಮದುವೆಯಾಗಲು ನಿರಾಕರಿಸಿದ್ದಕ್ಕೆ ಯವತಿ ಮೇಲೆ ಅಮಾನುಷ ಹಲ್ಲೆ..
ಮದುವೆಯಾಗಲು ನಿರಾಕರಿಸಿದ 19 ವರ್ಷದ ಯುವತಿಯನ್ನ 24 ವರ್ಷದ ಯುವಕನೊಬ್ಬ ಮನಸೋ ಇಚ್ಚೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ವಿಡಿಯೋದಲ್ಲಿರುವ ಪ್ರಮುಖ ಆರೋಪಿ ಮೌಗಂಜ್ ಪ್ರದೇಶದ ಧೇರಾ ಗ್ರಾಮದ ನಿವಾಸಿ ಪಂಕಜ್ ತ್ರಿಪಾಠಿ ಎಂದು ಪೊಲೀಸರು ಗುರುತಿಸಿದ್ದಾರೆ. ಸಂತ್ರಸ್ತೆ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಉಪವಿಭಾಗದ ಪೊಲೀಸ್ ನವೀನ್ ತಿವಾರಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸಂತ್ರಸ್ತೆ ಮತ್ತು ಆರೋಪಿಗಳು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕುಟುಂಬದವರು ಒಪ್ಪಿಕೊಳ್ಳದ ಕಾರಣಕ್ಕೆ ಯುವತಿ ಮದುವೆಯಾಗಲು ನಿರಾಕರಿಸಿದ ನಂತರ ಕಿರಿಕಿರಿಗೊಳ್ಳುವ ಯುವಕ ಆಕೆಯನ್ನ ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಸಂತ್ರಸ್ತೆ ಪೊಲೀಸ್ ಠಾಣೆಗೆ ಬಂದಿದ್ದರು, ಆದರೆ ಅವರು ದೂರು ನೀಡಲು ನಿರಾಕರಿಸಿದರು. ಆರೋಪಿಯನ್ನು ಐಪಿಸಿಯ ಸೆಕ್ಷನ್ 151 (ಸಾರ್ವಜನಿಕ ಶಾಂತಿ ಕದಡುವುದು) ಅಡಿಯಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ವರದಿ ಹೇಳಿದೆ.
ಶನಿವಾರ ವಿಡಿಯೋ ವೈರಲ್ ಆದ ನಂತರ ವಿಡಿಯೋ ಚಿತ್ರೀಕರಿಸಿ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ಧ ಸಂತ್ರಸ್ಥೆ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Madhya Pradesh: Young girl brutally attacked for refusing to marry.








