ಫೈನಲ್’ಗೆ ಲಗ್ಗೆ ಇಟ್ಟ ಬೆಂಗಳೂರು ವಾರಿಯರ್ಸ್ !
ಮಯಾಂಕ್ ಅಗರ್ ವಾಲ್ ಅಬ್ಬರದ ಶತಕ
ಮಹಾರಾಜ ಟ್ರೋಫಿಯ ಫೈನಲ್ ಗೆ ಬೆಂಗಳೂರು
ಮಯಾಂಕ್ ಆಟಕ್ಕೆ ಮನೀಶ್ ತಂಡ ಉಡೀಸ್
ಬೆಂಗಳೂರು ಬ್ಲಾಸ್ಟರ್ಸ್ ಗೆ 44 ರನ್ ಗಳ ಜಯ
ಮಹಾರಾಜ ಟ್ರೋಫಿಯಲ್ಲಿ ಮಯಾಂಕ್ ಅಗರ್ ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಫೈನಲ್ ತಲುಪಿದೆ.
ಗುಲ್ಬರ್ಗಾ ಮಿಸ್ಟಿಕ್ಸ್ – ಬೆಂಗಳೂರು ಬ್ಲಾಸ್ಟರ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆದಿದ್ದು, ಬೆಂಗಳೂರು ತಂಡ 44 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕ ಮನೀಷ್ ಪಾಂಡೆ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಅದರಂತೆ ಮೊದಲ ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು.

ಬೆಂಗಳೂರು ಪರ ಮಯಾಂಕ್ ಅಗರ್ ವಾಲ್ 112 ರನ್ ಗಳಿಸಿದ್ರೆ ಎಲ್ ಆರ್ ಚೇತನ್ 80 ರನ್ ಚಚ್ಚಿದಿದ್ದಾರೆ. ಅನಿರುದ್ದಾ ರಕ್ಷಿತ್ 20 ರನ್ ಗಳಿಸಿದರು.
ಪಂದ್ಯವನ್ನು ಗೆಲ್ಲಲು 228 ರನ್ ಗಳ ಗುರಿಯನ್ನು ಬೆನ್ನಟ್ಟಿದ ಗುಲ್ಬರ್ಗಾ ತಂಡ 18.2 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಯ್ತು.
ಉಲ್ಬರ್ಗಾ ಪರ ರೋಹನ್ ಪಾಟೀಲ್ 108 ರನ್ ಗಳನ್ನು ಸಿಡಿಸಿದರು. ಮನೋಜ್ ಭಂಡಾಗೆ 26 ರನ್ ಗಳಿಸಿದ್ದು ಬಿಟ್ಟರೇ ಮತ್ಯಾವ ಆಟಗಾರ ಹೆಚ್ಚು ಹೊತ್ತು ಕ್ರೀಸ್ ನಲ್ಲಿಯೇ ನಿಲ್ಲಲಿಲ್ಲ.
ಇದರೊಂದಿಗೆ ಮಯಾಂಕ್ ಅಗರ್ ವಾಲ್ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ನೇರವಾಗಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಸೋಲುಂಡ ಗುಲ್ಬರ್ಗಾ ತಂಡ ಎರಡನೇ ಕ್ವಾಲಿಫೈಯರ್ ನಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಆಗಸ್ಟ್ 25 ರಂದು ನಡೆಯಲಿದೆ.








