ಮಹಾರಾಷ್ಟ್ರ – 1 ರಿಂದ 12 ನೇ ತರಗತಿಯ ಪಠ್ಯಕ್ರಮ ಶೇಕಡಾ 25 ರಷ್ಟು ಕಡಿತ
ಮುಂಬೈ, ಜುಲೈ 25: ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡಲು 1 ರಿಂದ 12 ನೇ ತರಗತಿಯ ಪಠ್ಯಕ್ರಮವನ್ನು ಶೇಕಡಾ 25 ರಷ್ಟು ಕಡಿಮೆಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಶನಿವಾರ ಪ್ರಕಟಿಸಿದೆ.
ಪಠ್ಯಪುಸ್ತಕಗಳಿಂದ ಯಾವ ಪಾಠಗಳನ್ನು ಕೈಬಿಡಲಾಗಿದೆ ಎಂಬ ವಿವರಗಳನ್ನು ಮಹಾರಾಷ್ಟ್ರ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎಂಎಸ್ಸಿಇಆರ್ಟಿ) ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ವರ್ಷಾ ಗಾಯಕವಾಡ್ ತಿಳಿಸಿದ್ದಾರೆ.
ಶಾಲೆಗಳು ಭೌತಿಕವಾಗಿ ಪುನಃ ತೆರೆಯದ ಕಾರಣ, ವಿದ್ಯಾರ್ಥಿಗಳ ಮೇಲಿನ ಹೊರೆ ಸರಾಗಗೊಳಿಸುವಂತೆ 2020-21ರ ಶೈಕ್ಷಣಿಕ ವರ್ಷದ ಪಠ್ಯಕ್ರಮವನ್ನು ಶೇಕಡಾ 25 ರಷ್ಟು ಕಡಿಮೆಗೊಳಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದ್ದೆ








