ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ಆಗಿದ್ದ ಪಾಟೀಲ್ ನೀಲಂಗೇಕರ್ ಅವರು ಇಂದು ವಿಧಿವಶವರಾಗಿದ್ದಾರೆ. ಇತ್ತೀಚೆಗಷ್ಟೇ ನೀಲಗಾಂಕೇರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರು ಗುಣಮುಖರಾಗಿದ್ದರು. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಕಳೆದ ನಾಲ್ಉ ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದ್ರೆ ಇದೀಗ 91 ವರ್ಷದ ಪಾಟೀಲ್ ಅವರು ನಿಧನರಾಗಿದ್ದು, ಅವರ ಸಾವಿಗೆ ಕಿಡ್ನಿ ವೈಫಲ್ಯ ಕಾರಣ ಎನ್ನಲಾಗಿದೆ.
ಇನ್ನೂ ಲಾತೂರರ್ ನ ನೀಲಂಗದ ಬಳಿ ಅವರ ಅಂತಿಮ ಸಂಸ್ಕಾರಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗಿದೆ. ತನ್ನ ಕಟ್ಟುನಿಟ್ಟಿನ ಶಿಸ್ತಿಗೆ ಹೆಸರುವಾಸಿಯಾಗಿದ್ದ ಪಾಟೀಲ್ ಅವರು ಜೂನ್ 3,1985ರಿಂದ ಮಾರ್ಚ್ 6 1986ರ ತನಕ ಅಲ್ಪ ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. 1962ರಿಂದ ಏಳು ಬಾರಿ ನಿಲಂಗ ವಿಧಾನಸಭಾ ಕ್ಷೇತ್ರದಿಂದ ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರು. ಪಾಟೀಲರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.








