ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಮೇಲೆ ಹಲ್ಲೆ….
ಮಕ್ಕಳ ಕಳ್ಳರೆಂದು ಭಾವಿಸಿ ನಾಲ್ವರು ಸಾಧುಗಳ ತಂಡವನ್ನ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಹರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಥುರಾ ನಿವಾಸಿಗಳಾದ ನಾಲ್ವರು ಸಾಧುಗಳು ಕರ್ನಾಟಕದ ಬಿಜಾಪುರದಿಂದ ಪಂಢರಪುರಕ್ಕೆ ದರ್ಶನಕ್ಕೆ ಹೋಗುತ್ತಿದ್ದರು ಹೋಗುತ್ತಿದ್ದರು ಎನ್ನಲಾಗಿದೆ.
ಸಾಂಗ್ಲಿ ಜಿಲ್ಲೆಯಲ್ಲಿ ಮಕ್ಕಳು ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಬ್ಬಿಸಲಾಗಿತ್ತು. ಅದಕ್ಕೆ ಸರಿಯಾಗಿ ನಾಲ್ವರು ಸಾಧುಗಳು ಲವನ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಅನುಮಾನಗೊಂಡ ಜನತೆ ದೊಣ್ಣೆ ಕೋಲಿನಿಂದ ಮನಬಂದಂತೆ ತಿಳಿಸಿದ್ದಾರೆ.
Four #Sadhus have been brutally attacked by the villagers in Sangli, #Maharashtra
Sadhus have been attacked on suspicion of being a member of a child lifter gang…@mieknathshinde @myogiadityanath @Dev_Fadnavis @narendramodi @AmitShah @DrMohanBhagwat @OfficeofUT @AUThackeray pic.twitter.com/5iT7FDV92o
— Indrajeet chaubey (@indrajeet8080) September 14, 2022
ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಿಚಾರಿಸಿದಾಗ ಪಂಢರಾಪುರಕ್ಕೆ ಹೊರಟಿದ್ದ ಸಾಧುಗಳು ಸೋಮವಾರ ಲವಂಗಾ ಗ್ರಾಮದಲ್ಲಿ ದೇವಸ್ಥಾನದಲ್ಲಿ ತಂಗಿದ್ದು ಬೆಳಿಗ್ಗೆ ದೇವಸ್ಥಾನದ ದಾರಿ ಗೊತ್ತಿಲ್ಲದ ಕಾರಣ ದಾರಿ ಬದಿ ಇದ್ದ ಮಕ್ಕಳನ್ನ ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ಸ್ಥಳಿಯರು ಸಾಧುಗಳ ಮೇಲೆ ಹಲ್ಲೆ ಮಾಡಿದ್ದಾರೆ.
ಥಳಿಸಿದ ವಿಡಿಯೋ ವೈರಲ್ ಆದ ಬಳಿಕ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.