ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರವು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ 5% ಮೀಸಲಾತಿ ನೀಡಲು ಮಹತ್ವದ ತೀರ್ಮಾನ ಕೈಗೊಂಡಿದೆ. ಶುಕ್ರವಾರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲ್ಲಿಕ್ ಮಾತನಾಡಿ ಆದಷ್ಟು ಶೀಘ್ರದಲ್ಲೇ ಈ ಕಾಯ್ದೆಯನ್ನು ಅಂಗೀಕರಿಸುವುದಾಗಿ ತಿಳಿಸಿದರು.
ಶಾಲೆಗಳಲ್ಲಿ ಪ್ರವೇಶ ಆರಂಭ ಆಗುವ ಮೊದಲು ಮಹಾರಾಷ್ಟ್ರದ ವಿಧಾನ ಪರಿಷತ್ತಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಒಟ್ಟಿನಲ್ಲಿ ಮೀಸಲಾತಿಯ ರಾಜಕೀಯ ಮುಂದುವರಿಯುತ್ತಾ ಸಾಗಿರುವುದು ಅನೇಕ ಚರ್ಚೆಗೆ ಗ್ರಾಸವಾಗಿದೆ. ಬಿ ಜೆ ಪಿ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಸ್ಥಾನ ಹೊಂದಿದ್ದು ಕಾಯ್ದೆ ತಡೆಯಲು ಸಂಖ್ಯಾಬಲದ ಕೊರತೆ ಇದ್ದು ಮಸೂದೆ ಯಾವುದೇ ತಡೆಯಿಲ್ಲದೆ ಪಾಸ್ ಆಗುವ ಸಾಧ್ಯತೆ ಅಧಿಕವಾಗಿದೆ.








