ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ನಿಲಾನ್ಯಾಸ ನೆರವೇರಲಿದ್ದು, ಹಲವಾರು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಆದ್ರೆ ಅಯೋಧ್ಯೆ ಭಾಗದಲ್ಲಿ ಅಷ್ಟೇ ಅಲ್ದೇ ಇಡೀ ದೇಶದಲ್ಲೇ ಕೊರೊನಾ ಹಾವಳಿ ಹೆಚ್ಚಾಗಿರುವ ಪರಿಣಾಮ ಬಿಜೆಪಿಯ ಹಿರಿಯ ನಾಯಕಿ ಉಮಾ ಸೇರಿದಂತೆ ಅನೇಕರು ಗೈರಾಗುವ ಸಾಧ್ಯತೆಗಳು ದಟ್ಟಾಗಿವೆ. ಇದೀಗ ಈ ಸಾಲಿಗೆ ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥರಾದ ಉದ್ಧವ್ ಟಾಕ್ರೆ ಅವರು ಸೇರಲಿದ್ದಾರೆ ಎನ್ನಲಾಗ್ತಿದೆ.
ಹೌದು ಕೊರೊನಾ ಭೀಕರತೆ ಹೆಚ್ಚತ್ತಲೇ ಇರುವ ಪರಿಣಾಮ ಉದ್ಧವ್ ಠಾಕ್ರೆ ಅವರು ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಕಡಿಮೆಯಿದೆ ಎಂಬ ಮಾತುಗಳು ವ್ಯಾಪವಾಗಿ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ ಸ್ವತಃ ಸಂಜಯ್ ರೌತ್ ಅವರೇ ಈ ಬಗ್ಗೆ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಹೋಗುವುದು ಮುಖ್ಯ. ಸಿಎಂ ಉದ್ಧವ್ ಠಾಕ್ರೆ ಅವರು ಯಾವಾಗ ಬೇಕಾದರೂ ಅಯೋಧ್ಯೆಗೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ. ಇದೇ ವೇಳೆ ಶಿವಸೇನೆ ಪಕ್ಷ 1 ಕೋಟಿ ರೂಪಾಯಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವುದನ್ನು ತಿಳಿಸಿದ್ದಾರೆ.
ಡಿ. ಗುಕೇಶ್ ಗೆ ವಿಶ್ವ ‘ಚೆಸ್ ಚಾಂಪಿಯನ್’ ಪಟ್ಟ
Gukesh Wins World Chess Championship ಭಾರತದ 18 ವರ್ಷದ ಡಿ. ಗುಕೇಶ್ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ...