MahaShivaratri : 12 ಶಿವನ ದೇವಾಲಯಗಳಿಗೆ ಟ್ರೈನ್ ಟೂರ್ ಪ್ಯಾಕೇಜ್..!!
ಮಹಾ ಶಿವರಾತ್ರಿಗೆ ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ
12 ಶಿವನ ದೇವಾಲಯಗಳಿಗೆ ಟೂರ್ ಪ್ಯಾಕೇಜ್
12 ರಾತ್ರಿಗಳು / 13 ದಿನಗಳು ಪ್ರವಾಸ ಪ್ಯಾಕೇಜ್
IRCTC ವೆಬ್ಸೈಟ್ ನಲ್ಲೂ ಬುಕಿಂಗ್ ಅವಕಾಶ
ಮಾರ್ಚ್ 08ರಿಂದ ಮಾರ್ಚ್ 20 ರ ವರೆಗೂ ಪ್ರವಾಸ
ಈ ಸಾಲಿನ ಮಹಾಶಿವರಾತ್ರಿಗೆ ಭಕ್ತಾಧಿಗಳಿಗೆ ರೈಲು ಇಲಾಖೆ ವಿಶೇಷ ಪ್ಯಾಕೇಜ್ ಘೋಷಿಸಿದೆ…
ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಟೂರಿಸಂ ಕಾರ್ಪೊರೇಷನ್ (IRCTC) ಜ್ಯೋತಿರ್ಲಿಂಗಗಳನ್ನು ಭೇಟಿ ಮಾಡಲು ಬಯಸುವ ಯಾತ್ರಾರ್ಥಿಗಳಿಗಾಗಿ ವಿಶೇಷವಾದ ಪ್ರಯಾಣದ ಪ್ಯಾಕೇಜ್ ಪ್ರವಾಸವನ್ನು ರಚಿಸಿದೆ.
IRCTC ಜ್ಯೋತಿರ್ಲಿಂಗ ಯಾತ್ರಾ ಪ್ರವಾಸ ಪ್ಯಾಕೇಜ್ನಲ್ಲಿ ಓಂಕಾರೇಶ್ವರ್, ಮಹಾಕಾಳೇಶ್ವರ್, ಸೋಮನಾಥ, ನಾಗೇಶ್ವರ್, ಭೇಟ್ ದ್ವಾರಕಾ ಮತ್ತು ಶಿವರಾಜಪುರ ಬೀಚ್ ನಂತಹ ಜನಪ್ರಿಯ ಯಾತ್ರಾ ಸ್ಥಳಗಳನ್ನು ಸೇರಿಸಲಾಗಿದೆ.
ಈ ಪ್ಯಾಕೇಜ್ ನಲ್ಲಿ ಟಿಕೆಟ್ ಬುಕ್ ಮಾಡಲು ಬಯಸುವವರು IRCTC ಟೂರಿಸ್ಟ್ ಫೆಸಿಲಿಟೇಶನ್ ಸೆಂಟರ್, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಅಧಿಕಾರಿಗಳ ಮೂಲಕವೂ ಬುಕಿಂಗ್ ಮಾಡಬಹುದು. IRCTC ವೆಬ್ ಸೈಟ್ನಲ್ಲಿ ಕೂಡ ರೈಲು ಟಿಕೆಟ್ ಬುಕಿಂಗ್ ಲಭ್ಯವಿದೆ. ಇದಕ್ಕೆ ಸುಮಾರು 15, 350 ರೂ. ವೆಚ್ಚವಾಗಲಿದೆ..
MahaShivaratri , train tour package to 12 shiv mandirs