ನವದೆಹಲಿ : ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮದಿನಾಚರಣೆ. ಈ ಹಿನ್ನೆಲೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಜ್ ಘಾಟ್ ಗೆ ತೆರಳಿ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ.
ರಾಷ್ಟ್ರಪಿತ ಗಾಂಧೀಜಿ ಅವರ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಟ್ವೀಟ್ ಮಾಡಿದ್ದು, ರಾಷ್ಟ್ರದ ಜನತೆಯ ಪರವಾಗಿ ಗಾಂಧಿ ಜಯಂತಿಯಂದು ಬಾಪುವಿಗೆ ಗೌರವ ಸಲ್ಲಿಸುತ್ತೇನೆ.
ಅವರ ಸತ್ಯ, ಅಹಿಂಸೆ ಮತ್ತು ಪ್ರೀತಿಯ ಸಂದೇಶವು ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆಯನ್ನು ತರುವ ಮೂಲಕ ವಿಶ್ವದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ.
ಬಾಪು ಎಲ್ಲಾ ಮಾನವೀಯತೆಗೆ ಸ್ಫೂರ್ತಿಯ ಮೂಲವಾಗಿ ಉಳಿದಿದ್ದಾರೆ ಎಂದು ಶುಭಕೋರಿದ್ದಾರೆ.
ಇದನ್ನೂ ಓದಿ : ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ : ಮೋದಿ ನಮನ
ಮತ್ತೊಂದು ಟ್ವೀಟ್ ನಲ್ಲಿ ಗಾಂಧಿ ಜಯಂತಿಯ ಸುದಿನದಂದು ಅಹಿಂಸ ಮತ್ತು ಸತ್ಯದ ಮಂತ್ರವನ್ನು ಅನುಸರಿಸುವ ಮೂಲಕ ರಾಷ್ಟ್ರದ ಕಲ್ಯಾಣ ಮತ್ತು ಪ್ರಗತಿಗೆ ನಮ್ಮನ್ನು ಸಮರ್ಪಿಸಲು ನಿರ್ಧರಿಸೋಣ ಮತ್ತು ಸ್ವಚ್ಛ, ಸಮರ್ಥ, ಶಕ್ತಿಯುತ ಮತ್ತು ಉಜ್ವಲ ಭಾರತವನ್ನು ನಿರ್ಮಿಸುವ ಮೂಲಕ ಗಾಂಧಿ ಕನಸನ್ನು ನನಸು ಮಾಡೋಣ ಎಂದು ರಾಷ್ಟ್ರಪತಿಗಳು ಕರೆ ನೀಡಿದ್ದಾರೆ.
https://twitter.com/rashtrapatibhvn/status/1311838223757316096?s=20








