Canada | ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ
ಕೆನಡಾದ ರಿಚ್ ಮಂಡ್ ಹಿಲ್ ನಲ್ಲಿ ಘಟನೆ
ವಿಷ್ಣು ದೇವಾಲಯದಲ್ಲಿರುವ ಗಾಂಧಿ ಪ್ರತಿಮೆ
ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಭಾರತ
ತನಿಖೆಗೆ ಭಾರತೀಯ ರಾಯಭಾತ ಕಚೇರಿ ಒತ್ತಾಯ
ಕೆನಡಾ : ಇಲ್ಲಿನ ರಿಚ್ ಮಂಡ್ ಹಿಲ್ ನಲ್ಲಿರುವ ಹಿಂದೂ ದೇವಾಲಯದಲ್ಲಿನ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಇದಕ್ಕೆ ಭಾರತೀಯ ರಾಯಭಾರ ಕಚೇರಿ ಆಕ್ರೋಶ ಹೊರಹಾಕಿದ್ದು, ತಕ್ಷಣ ತನಿಖೆಗೆ ಒತ್ತಾಯಿಸಿದೆ.
ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರವೇಶಗಲ್ಲಿ ವಿಷ್ಣು ದೇವಾಲಯದಲ್ಲಿ ಐದು ಮೀಟರ್ ಎತ್ತರದ ಮಹಾತ್ಮ ಗಾಂಧಿ ಪ್ರತಿಮೆನ್ನು ಬುಧವಾರ ಧ್ವಂಸಗೊಳಸಲಾಗಿದೆ ಎಂದು ಸಿಬಿಸಿ ವರದಿ ಮಾಡಿದೆ.
ಜೊತೆಗೆ ಪ್ರತಿಮೆಯ ಮೇಲೆ ಅತ್ಯಾಚಾರಿ ಮತ್ತು ಖಲಿಸ್ತಾನ್ ಎಂಬ ಆಕ್ಷೇಪಾರ್ಹ ಪದಗಳನ್ನು ಸಹ ಬರೆಯಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಸ್ಪಂದಿಸಿರುವ ಯಾರ್ಕ್ ಪ್ರದೇಶಿಕ ಪೊಲೀಸರು, ಯಾವುದೇ ರೀತಿಯ ದ್ವೇಷ – ಪೂರ್ವಗ್ರಹ ಪೀಡಿತ ಘಟನೆಯನ್ನು ಸಹಿಸುವುದಿಲ್ಲ.
ಇತರರಿಗೆ ನೋವನ್ನು ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.