ಸುಮಾರು 2.54 ಕೋಟಿ ರೂಪಾಯಿಗೆ ಹರಾಜಾದ ಮಹಾತ್ಮ ಗಾಂಧೀಜಿಯವರ ಕನ್ನಡಕ
ಲಂಡನ್, ಅಗಸ್ಟ್24: ಮಹಾತ್ಮ ಗಾಂಧೀಜಿಯವರ ವೃತ್ತಾಕಾರದ, ಚಿನ್ನದ ಲೇಪಿತ ಒಂದು ಜೋಡಿ ಕನ್ನಡಕವನ್ನು 260,000 ಪೌಂಡ್‌ಗಳಿಗೆ (ಸುಮಾರು 2.54 ಕೋಟಿ ರೂಪಾಯಿ) ಹರಾಜು ಮಾಡಲಾಗಿದೆ. ಈ ತಿಂಗಳ ಆರಂಭದಲ್ಲಿ, ನೈರುತ್ಯ ಇಂಗ್ಲೆಂಡ್‌ನ ಅತಿದೊಡ್ಡ ಹರಾಜು ಸಂಸ್ಥೆಯಾದ ಈಸ್ಟ್ ಬ್ರಿಸ್ಟಲ್ ಹರಾಜಿನಲ್ಲಿ ಸರಳವಾದ ಹೊದಿಕೆಯೊಳಗೆ ಅದರ ಲೆಟರ್‌ಬಾಕ್ಸ್‌ನಲ್ಲಿ ಕನ್ನಡಕವನ್ನು ಹರಾಜು ಮಾಡಲಾಯಿತು. ಈ ಕನ್ನಡಕವನ್ನು ಪಶ್ಚಿಮ ಲಂಡನ್ ವ್ಯಕ್ತಿ ಖರೀದಿ ಮಾಡಿರುವುದಾಗಿ ಸಂಸ್ಥೆ ಹೇಳಿದೆ.

ಬೆಲೆ ಕಟ್ಟಲಾಗದ ಅಮೂಲ್ಯ ವಸ್ತುವಿಗೆ ಅತ್ಯುತ್ತಮ ಫಲಿತಾಂಶ ದೊರಕಿದೆ. ಬಿಡ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬ್ರಿಸ್ಟಲ್ ಹರಾಜು ಸಂಸ್ಥೆ ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದೆ.
ಈ ಚಿನ್ನ ಲೇಪಿತ ಕನ್ನಡಕವನ್ನು ಗಾಂಧೀಜಿ ಧರಿಸುತ್ತಿದ್ದರು. ಬಳಿಕ ಕನ್ನಡಕವನ್ನು ದಕ್ಷಿಣ ಆಫ್ರಿಕಾದ ಗಾಂಧೀಜಿಯವರ ಭೇಟಿ ಸಂದರ್ಭದಲ್ಲಿ ಮಾರಾಟಗಾರರ ಚಿಕ್ಕಪ್ಪನಿಗೆ ನೀಡಿದ್ದರು ಎಂದು ಹರಾಜು ಸಂಸ್ಥೆಯ ವೆಬ್‌ಸೈಟ್ ಹೇಳಿದೆ.

ಮಾರಾಟಗಾರರ ಚಿಕ್ಕಪ್ಪ ಆ ಸಮಯದಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದರು ಮತ್ತು ಒಳ್ಳೆಯ ಕಾರ್ಯಗಳಿಗಾಗಿ ಗಾಂಧೀಜಿಯವರು ಧನ್ಯವಾದಗಳ ಮೂಲಕ ಇವುಗಳನ್ನು ಉಡುಗೊರೆಯಾಗಿ ನೀಡಿದರು ಎಂದು ಬ್ರಿಸ್ಟಲ್ ಹರಾಜು ಸಂಸ್ಥೆಯ ವೆಬ್ ಸೈಟ್ ನಲ್ಲಿ ಹೇಳಲಾಗಿದೆ.








